ಬೆಟ್ಟದ ಪುರದ ದಿಟ್ಟರು- ಮಕ್ಕಳ ಚಿತ್ರ ಜು.21ಕ್ಕೆ ಬಿಡುಗಡೆ

Upayuktha
0

ನಾ ಡಿಸೋಜ ರವರ 30ಕ್ಕೂ ಹೆಚ್ಚು ವರ್ಷಗಳ ಹಿಂದೆ ಆನೆ ಬಂತೊಂದಾನೆ ಮತ್ತು ಬೆಟ್ಟದಪುರದ ದಿಟ್ಟರು ಕತೆಯನ್ನು ಬರೆಯುವಾಗ ಮಲೆನಾಡು ಸಣ್ಣ ಪರಿವರ್ತನೆಯ ಹಂತದಲ್ಲಿತ್ತು. 2000 ದ ನಂತರ, ಜಗತ್ತಿನ ಬದಲಾವಣೆಯ ವೇಗದಲ್ಲಿ ಮಲೆನಾಡು ಪರಿವರ್ತನೆಯ ವೇಗವನ್ನೇ ಪಡೆಯಿತು. ಮಲೆನಾಡಿನ ಕಾಡು, ಬದುಕು, ಸಂಸ್ಕೃತಿ, ಜೀವನ ಶೈಲಿ, ಸಂಪ್ರದಾಯ ಎಲ್ಲವುದರ ಸೊಗಡು ನಿಧಾನವಾಗಿ ಮಾಯವಾಗುತ್ತ ಹೊರಗಿನ ನಾಗರಿಕ ಬದುಕಿನೊಂದಿಗೆ ಮಲೆನಾಡು ಲೀನವಾಗುತ್ತಿದೆ.


ತೀವ್ರ ಬದಲಾವಣೆಯ ಹಂತದಲ್ಲಿ ಮಲೆನಾಡಿನ ಹಿಂದಿನ ಸೊಗಡು, ಸೊಗಸು, ಶೈಲಿಗಳನ್ನು ನಾ ಡಿಸೋಜರವರ ಕತೆಗಳನ್ನೇ ಆಧಾರವಾಗಿ ಇಟ್ಟುಕೊಂಡು ಚಿತ್ರಿಸಿ, ಒಂದು ದಾಖಲೆಯಾಗಿ, ಒಂದು ಸಾಕ್ಷಿಯಾಗಿ, ಒಂದು ಕಥಾನಕವಾಗಿ, ದೃಶ್ಯ-ಭಾವಗಳ ಕಾವ್ಯವಾಗಿ ನಿರ್ದೇಶಕ ಸುಬ್ರಹ್ಮಣ್ಯ ತೆಮೆಮನೆಯವರ ಕಲ್ಪನೆಯಲ್ಲಿ ಬೆಟ್ಟದ ಪುರದ ದಿಟ್ಟರು ಸೃಷ್ಟಿಯಾಗಿದೆ.


ಇದು ಮಕ್ಕಳ ಚಿತ್ರ. ಆದರೆ, ಮಕ್ಕಳಿಗೆ ಮಾತ್ರ ಅಲ್ಲ, ಮಕ್ಕಳ ಜೊತೆ ದೊಡ್ಡವರು ಕುಳಿತು ಮೆಲುಕು ಹಾಕುತ್ತ ಸಂಭ್ರಮಿಸುವಂತೆ ಮಾಡುವ ಚಿತ್ರ ಇದು.


ಮುಂದಿನ ಶುಕ್ರವಾರದಿಂದ ಅಂದರೆ ದಿನಾಂಕ 21.07.2023 ಸಮಯ ಸಂಜೆ 7.00ಯಿಂದ ಬೆಟ್ಟದ ಪುರದ ದಿಟ್ಟರು ಯೂಟೂಬ್‌ನಲ್ಲಿ ಪ್ರಾರಂಭವಾಗಿ ಪ್ರಸಾರವಾಗಲಿದೆ.  

ಬೆಟ್ಟದ ಪುರದ ದಿಟ್ಟರು ಸೀರೀಸ್‌ನ ಈ ಝಲಕ್ ಟೀಸರ್ ಇವತ್ತು ನಿಮಗಾಗಿ. ..



- ಅರವಿಂದ ಸಿಗದಾಳ್, ಮೇಲುಕೊಪ್ಪ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top