ಬೆಂಗಳೂರು: ನಾಳೆ ಗಾನೋತ್ಸವ-2023 ಕಾರ್ಯಕ್ರಮ

Upayuktha
0


ಬೆಂಗಳೂರು:
ಗಾನಸುಧಾ ಮ್ಯೂಸಿಕಲ್ ಅಕಾಡೆಮಿಯ ವತಿಯಿಂದ ಜುಲೈ 30, ಭಾನುವಾರ ಬೆಳಗ್ಗೆ 10 ರಿಂದ ರಾತ್ರಿ 8ರ ವರೆಗೆ ಜಯನಗರ 4ನೇ ಬಡಾವಣೆಯಲ್ಲಿರುವ ವಿವೇಕ ಆಡಿಟೋರಿಯಂ ('ವಾಯುಪಥ', #4, 31ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-560011) ನಲ್ಲಿ "ಗಾನೋತ್ಸವ-2023" ಶೀರ್ಷಿಕೆಯಲ್ಲಿ ಬಾಲಪ್ರತಿಭೆ ಮತ್ತು ಯುವ ಪ್ರತಿಭೆಗಳಿಂದ ಗಾಯನ ಕಾರ್ಯಕ್ರಮ ಏರ್ಪಡಿಸಿದ್ದು, ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಾಡಿನ ಸಂಗೀತ ದಿಗ್ಗಜರುಗರಾದ ವಿ. ಶೃಂಗೇರಿ ಹೆಚ್.ಎಸ್. ನಾಗರಾಜ್ ಮತ್ತು ವಿ. ಪುತ್ತೂರು ನರಸಿಂಹ ನಾಯಕ್ ಉಪಸ್ಥಿತರಿರುತ್ತಾರೆ. 


ಈ ಸಂಗೀತ ಸಂಭ್ರಮದಲ್ಲಿ ಗಾಯನದ ಹೊಳೆ ಹರಿಸುವವರು : ಕುಮಾರಿಯರಾದ ಅನುಕೃಪ ರೌಡೂರ್, ಮನಸ್ವಿ ಜಿ. ಕಶ್ಯಪ್, ಸಂಜನಾ, ದೀಪ್ತಿ ಶ್ರೀನಿವಾಸನ್ ಮತ್ತು ಶ್ರೀಮತಿ ವಿದ್ಯಾ ಕಲ್ಕೋಡ್. ಇವರ ಗಾಯನಕ್ಕೆ ವಾದ್ಯ ಸಹಕಾರ ನೀಡುವ ಕಲಾವಿದರು- ಪಿಟೀಲು : ಕೃಷ್ಣ ಕಶ್ಯಪ್, ರಶ್ಮಿ ಆರ್., ಮೃದಂಗ : ಸರ್ವಜಿತ್, ಬಿ.ಎನ್. ಕಾರ್ತಿಕ್ ಪ್ರಣವ್, ಕೀಬೋರ್ಡ್ : ಅಮಿತ್ ಶರ್ಮಾ, ತಬಲಾ : ಮಧುಸೂದನ್ ಕೊಪ್ಪ, ಪ್ರಮೋದ್ ಗಬ್ಬೂರ್, ಗಿಟಾರ್ : ಅನಿರುದ್ಧ ಗಣೇಶ್, ಡ್ರಮ್ಸ್ : ಸೃಜನ್ ಕೊಡವೂರ್, ಮಂಜರಿ ಹೊಂಬಲಿ ಸಾಥ್ ನೀಡಲಿದ್ದಾರೆ ಎಂದು ಅಕಾಡೆಮಿಯ ಮುಖ್ಯಸ್ಥರೂ ಹಾಗೂ ಗುರುಗಳೂ ಆದ ವಿದುಷಿ ಶ್ರೀಮತಿ ದಿವ್ಯಾ ಗಿರಿಧರ್ ಅವರು ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top