ಬೆಂಗಳೂರು: ನೃತ್ಯ ದಿಶಾ ಟ್ರಸ್ಟಿನ ವತಿಯಿಂದ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ "ನೃತ್ಯ ನೀರಾಜನ" ಕಿರಿಯರ ನೃತ್ಯ ಪ್ರದರ್ಶನ ಕಾರ್ಯಕ್ರಮದಲ್ಲಿ ಟ್ರಸ್ಟಿನ ಸಂಸ್ಥಾಪಕರೂ ಗುರುಗಳೂ ಆದ 'ಕಲಾಭೂಷಿಣಿ' ದರ್ಶಿನಿ ಮಂಜುನಾಥ್ ಅವರ ಶಿಷ್ಯೆಯರಾದ ಕು. ಅದ್ವಿಕಾ ವರ್ಷ, ಕು. ಸುಹಾನಿ ಜಿ. ಉಪೇಂದ್ರ, ಕು. ಎನ್. ಮಿತ್ರಶ್ರೀ, ಕು. ತನೀಷ್ಕಾ ಕನ್ನಟ್ಟಿ ಇವರುಗಳು ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮ ನೆರೆದಿದ್ದ ಕಲಾರಸಿಕರ ಮನಸೆಳೆಯಿತು.
ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಹಿರಿಯ ಕೊಳಲು ವಾದಕರಾದ ವಿ. ವೇಣುಗೋಪಾಲ್, ಮೃದಂಗ ವಾದಕರಾದ ವಿ. ಗಿರಿಧರ್ ಹಾಗೂ ವಿ. ಸೋನಿಯಾ ಪೋಡುವಲ್ ಆಗಮಿಸಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ