ನಾಟಕದ ರಚನೆಯನ್ನು ಮತ್ತು ನಿರ್ದೇಶನವನ್ನು ರಾಜ್‍ಗುರು ನೀಡಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರತ್ಕಲ್ ಗೋವಿಂದದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರ ಹಾಗೂ ಅರೆಹೊಳೆ ಪ್ರತಿಷ್ಠಾನ ಮಂಗಳೂರಿನ ಸಹಭಾಗಿತ್ವದಲ್ಲಿ ಗೋವಿಂದದಾಸ ಕಾಲೇಜಿನಲ್ಲಿ ಜುಲೈ31ರಂದು ಸಂಜೆ7.00 ಗಂಟೆಗೆ ನಡೆಯಲಿದೆ.
ಪ್ರಸಿದ್ಧ ರಂಗನಟ ಶಿವರಾಜು ಎನ್ ನಾಟಕ ಪ್ರದರ್ಶನ ನೀಡಲಿದ್ದಾರೆ. ವಿಭಿನ್ನ ಕಥಾ ವಸ್ತುವನ್ನೊಳಗೊಂಡ 55 ನಿಮಿಷದ ಒಂದು ಪ್ರೇಮಕಥೆ ನಾಟಕಕ್ಕೆ ಮುಕ್ತ ಪ್ರವೇಶವಿದ್ದು ನಾಟಕಾಸಕ್ತರು 'ರಂಗಪಯಣ'ದ ವಿಶಿಷ್ಟ ಸಾಧನೆಯ ಹೆಜ್ಜೆ ಗುರುತುಗಳನ್ನು ಬೆಂಬಲಿಸಬೇಕಾಗಿ ಸಂಘಟಕರು ಕೋರಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ