ರಾಜ್ಯದಲ್ಲಿ ಉಗ್ರ ಸಂಘಟನೆಗಳು ಸಕ್ರಿಯ ಆತಂಕಕಾರಿ ಬೆಳವಣಿಗೆ: ಬಿಜೆಪಿ

Upayuktha
0

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಮತಾಂಧ ಶಕ್ತಿಗಳು ತಲೆ ಎತ್ತಿ ಉಗ್ರ ಸಂಘಟನೆಗಳು ಸಕ್ರಿಯವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಬಿಜೆಪಿ ದ.ಕ ಜಿಲಾಧ್ಯಕ್ಷ ಸುದರ್ಶನ ಎಂ. ಹೇಳಿದ್ದಾರೆ.


ಬೆಂಗಳೂರಿನಲ್ಲಿ ಭಯೋತ್ಪಾದನೆಯ ಜಾಡನ್ನು ಭೇದಿಸಿದಾಗ ಉಗ್ರರಿಂದ ವಶಪಡಿಸಿಕೊಂಡಿರುವ ಸ್ಪೋಟಕ ವಸ್ತುಗಳನ್ನು ನೋಡಿದಾಗ ರಾಜ್ಯ ಹಾಗೂ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಭೀಕರ ಕೃತ್ಯಗಳನ್ನು ನಡೆಸುವ ಹುನ್ನಾರ ಎಂಬುದು ದೃಢಪಟ್ಟಿದೆ. ಸ್ಥಳೀಯ ಯುವಕರು ಭಯೋತ್ಪಾದಕ ಸಂಘಟನೆಯಲ್ಲಿ ನೇರವಾಗಿ ಸೇರಿಕೊಂಡಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಸುದರ್ಶನ್ ಕಳವಳ ವ್ಯಕ್ತಪಡಿಸಿದ್ದಾರೆ.


ಶಾಂತಿ ಸಾಮರಸ್ಯದ ಬಗ್ಗೆ ಭಾಷಣ ಮಾಡುವ ಧಾರ್ಮಿಕ ಮುಖಂಡರು, ರಾಜಕಾರಣಿಗಳು, ಬುದ್ಧಿಜೀವಿಗಳು ನಿದ್ದೆಗೆ ಶರಣಾಗಿದ್ದಾರಾ? ಎಂದು ಪ್ರಶ್ನಿಸಿರುವ ಅವರು, ಸಿ.ಸಿ.ಬಿ ಪೊಲೀಸರ ಸಮಯ ಪ್ರಜ್ಞೆಯಿಂದ ಉಗ್ರರನ್ನು ಬಂಧಿಸಿ ಮುಂದೆ ಆಗಬಹುದಾದ ಘೋರ ಅನಾಹುತವನ್ನು ತಪ್ಪಿಸಿದ ರಾಜ್ಯದ ಪೋಲಿಸ್ ಇಲಾಖೆಯ ಕಾರ್ಯಕ್ಷಮತೆಯನ್ನು ಬಿಜೆಪಿ ಅಭಿನಂದಿಸುತ್ತದೆ ಎಂದು ತಿಳಿಸಿದ್ದಾರೆ.

إرسال تعليق

0 تعليقات
إرسال تعليق (0)
To Top