ಸಿ.ಎ. ಇಂಟರ್ ಮೀಡಿಯಟ್ ಪರೀಕ್ಷೆ 2023: ಆಳ್ವಾಸ್‍ಗೆ ರಾಷ್ಟ್ರಮಟ್ಟದಲ್ಲಿ 10 ಮತ್ತು 50ನೇ ರ್‍ಯಾಂಕ್‌

Upayuktha
0

 


ಮೂಡುಬಿದಿರೆ: ಸಿ.ಎ. ಇಂಟರ್‍ ಮೀಡಿಯೇಟ್ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ಬಿ. ಕಾಂ. ವಿದ್ಯಾರ್ಥಿಗಳಾದ(2022-23) ದೀಪಕ್ ಹೆಗ್ಡೆ ಹಾಗೂ ಪ್ರಜ್ವಲ್ ಎ. ಮೂಲ್ಯ ಅಖಿಲ ಭಾರತ ಮಟ್ಟದಲ್ಲಿ ಕ್ರಮವಾಗಿ 10 ಮತ್ತು 50ನೇ ರ್‍ಯಾಂಕ್‌ ಗಳಿಸಿದ್ದು, ನಮ್ಮ ಇತಿಹಾಸದಲ್ಲೇ ಅತ್ಯುನ್ನತ ಸಾಧನೆಯಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು. 


ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ಸ್‍ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಆಯೋಜಿಸಿದ್ದ ಮೇ ಆವೃತ್ತಿಯ ಪರೀಕ್ಷಾ ಫಲಿತಾಂಶ ಬುಧವಾರ (ಜು.5) ಪ್ರಕಟಗೊಂಡಿದ್ದು, ಇಂಟರ್‍ ಮೀಡಿಯೇಟ್ ಪರೀಕ್ಷೆಯ ಗ್ರೂಪ್-01 ಮತ್ತು ಗ್ರೂಪ್-02 ಎರಡೂ ವಿಭಾಗಗಳಲ್ಲಿ ಕ್ರಮವಾಗಿ ಒಟ್ಟು 653 ಮತ್ತು 591  ಅಂಕಗಳನ್ನು  ಗಳಿಸುವ ಮೂಲಕ ದೀಪಕ್ ಹೆಗ್ಡೆ ಹಾಗೂ ಪ್ರಜ್ವಲ್ ಎ. ಮೂಲ್ಯ ಪ್ರಥಮ ಪ್ರಯತ್ನದಲ್ಲೇ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಈ ಇಬ್ಬರು ವಿದ್ಯಾರ್ಥಿಗಳೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ದತ್ತು ಶಿಕ್ಷಣ ಯೋಜನೆಯಡಿ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದರು. 


ಇನ್ಸ್‍ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಮಾನ್ಯತೆ ಪಡೆದ ರಾಜ್ಯದ ಏಕೈಕ ವಿದ್ಯಾಸಂಸ್ಥೆ ಆಳ್ವಾಸ್ ಕಾಲೇಜು ಎಂದು ಅವರು ತಿಳಿಸಿದರು.  


ಅಂಧ ವಿದ್ಯಾರ್ಥಿ ಜಯೇಶ್ ಇಂಟರ್‍ ಮೀಡಿಯೇಟ್ ಪರೀಕ್ಷೆಯ ಗ್ರೂಪ್-01 ಮತ್ತು ಗ್ರೂಪ್-02 ಎರಡೂ ವಿಭಾಗಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಅವರು ಆಳ್ವಾಸ್ ಕಾಲೇಜಿನಲ್ಲಿ ಸಂಪೂರ್ಣ ಉಚಿತ ಶಿಕ್ಷಣವನ್ನು ಪಡೆಯುತ್ತಿದ್ದು, ಅವರ ಸಾಧನೆಯು ಸಿಎ ಫಲಿತಾಂಶದಲ್ಲೇ ಅನನ್ಯವಾಗಿದೆ. 


ಮೇ2023 ರಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯಟ್  ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶೇಕಡಾ 10.24 ಫಲಿತಾಂಶ ಬಂದಿದ್ದರೆ,  ಆಳ್ವಾಸ್ ಪದವಿ ಕಾಲೇಜು ಗ್ರೂಪ್-01 ಮತ್ತು ಗ್ರೂಪ್-02 ಒಟ್ಟು 32 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 40 ಫಲಿತಾಂಶ ದಾಖಲಿಸಿದ್ದಾರೆ. 


ಕಾಲೇಜಿನ ಬಿ.ಕಾಂ. ವಿದ್ಯಾರ್ಥಿಗಳಾದ ದೀಪಕ್ ಹೆಗ್ಡೆ(653), ಪ್ರಜ್ವಲ್ ಎ. ಮೂಲ್ಯ (591), ಎಂ ಅಭಿಷೇಕ್ ರಾವ್ (580), ದಶಮಿ ಎನ್ (549), ಜಿ.ಸಿ.ಶಿವಪ್ರಸಾದ್(546), ಹರ್ಷಿತಾ ಪ್ರಭು (544), ಹೆಚ್ ಅತೀಶ್ ಅಕ್ರಮ್(543), ರಾಹುಲ್ ಕಾಮತ್ (532), ನೇಹಾ ನಾಯಕ್ (524), ಐಶ್ವರ್ಯ ಎಂ.(523), ನಾಗರಾಜ್ ಮಂಜಿತ್ತಾಯ(496), ಮಂಜೂಷಾ (483), ಮೋಹಿತ್ (471), ಜಾಹ್ನವಿ (469), ಆರ್ನಿಯಾ ಸೈನಾ ಡಿಸೋಜಾ(467), ನಂದನಾ(463), ಭುವನಾ ಶೆಣೈ (461), ದೀಕ್ಷಾ (460), ಎನ್ ನಿತ್ಯಾ(449), ಭೂಮಿಕಾ(466), ಅಂಕಿತಾ (455), ಗೌತಮೀ ಕೆ.ಹೆಚ್ (443), ಸಂಮೃದ್ಧಿ(443), ಅಮನ್ (438), ಜೋಯ್ಲಿನ್(434), ಗಗನ(433), ಪ್ರೇರಣಾ (420), ಲೀಸಾ ರೇಗೊ (417), ಜಯೇಶ್ (414), ಪ್ರಿಮಲ್ (409), ಪವನ್ (404) ಮತ್ತು ಶ್ರೀಧರ್(404)ಇವರು ಉತ್ತಮ  ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ.


ಇಂಟರ್ ಮೀಡಿಯಟ್ ಗ್ರೂಪ್ -01ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶೇಕಡಾ 18.95 ಫಲಿತಾಂಶ ಬಂದಿದ್ದರೆ, ಆಳ್ವಾಸ್ ಕಾಲೇಜಿನ ಒಟ್ಟು 22 ವಿದ್ಯಾರ್ಥಿಗಳು  ಉತ್ತೀರ್ಣರಾಗಿ ಶೇಕಡಾ 57.89 ಫಲಿತಾಂಶ ಪಡೆದಿದೆ. ಸೂರಜ್, ನಕ್ಷತ್ರ, ಶ್ರೀಕಾಂತ್, ನಿಶ್ಮಿತಾ, ರಕ್ಷಿತ್, ಸ್ಪರ್ಶ, ಜೋಶಲ್, ಶೀನಿಧಿ, ಸೃಜಾ, ಮಾನಸಾ, ನಿಖಿಲ್, ಕೌಶಿಕ್, ಮಧುಸೂಧನ್, ಪ್ರಮೋದ್ ಎಂ.ಜಿ., ಸಿಂಚನಾ, ರಮ್ಯಾ, ವಿಕ್ರಮ್, ಮಾನ್ಸಿ, ಸಿದ್ಧಾರ್ಥ್, ಗಂಗಾ, ಕೀರ್ತನಾ ಎಂ., ಸೋನಿಯಾ ಇವರು ಉತ್ತಮ  ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ.


ಇಂಟರ್ ಮೀಡಿಯಟ್ ಗ್ರೂಪ್ -02 ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶೇಕಡಾ 23.44 ಫಲಿತಾಂಶ ಬಂದಿದ್ದು, ಆಳ್ವಾಸ್ ಕಾಲೇಜಿನಲ್ಲಿ ಎಲ್ಲ 11 ವಿದ್ಯಾರ್ಥಿಗಳು  ಉತ್ತೀರ್ಣರಾಗಿ ಶೇಕಡಾ 100 ಫಲಿತಾಂಶ ಹೊಂದಿದೆ. ನೇಹಾ ಎಂ., ರಿಹಾಲ್ ಅಯ್ಯಪ್ಪ, ಪವನ್ ಕುಮಾರ್, ಶ್ರೇಯಾ, ಶರಣ್ ಕುಮಾರ್, ಸಫ್ವಾನ್ ಸಲೀಂ, ಆಜ್ನಾ ಶೆಣೈ, ಕಾರ್ತಿಕ್, ಶಶಾಂಕ್, ಹರೀಶ್, ಸುಮಂತ್ ಇವರು ಉತ್ತಮ  ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ.


ಸಿ.ಎ. ಅಂತಿಮ ಪರೀಕ್ಷೆ ಫಲಿತಾಂಶ :

2023 ಮೇ ಯಲ್ಲಿ ನಡೆದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹಿರಿಯ ವಿದ್ಯಾರ್ಥಿಗಳಾದ ಪವನ್, ಆರುಷಿ ಸಿ.ಎ., ಚೇತನ್ ಸಿ.ರಾವ್, ಮೆಲಿಟಾ ಲೋಬೋ, ಆದಿತ್ಯ ಭಟ್. ಆಶ್ರಿತಾ ಪಿ.ಎಚ್, ಆಕಾಶ್ ನಾಯ್ಕ, ಮುಸ್ಕಾನ್ ಜೈನ್, ಶ್ರದ್ಧಾ ಎಂ.ಎನ್., ಶರಣ್ಯ, ಭಾಗ್ಯಶ್ರೀ, ಮಾನ್ಯ ಎ.ಎಂ., ವಾಸವಿ ಮತ್ತು ಸುಪ್ರಿತಾ ಭಟ್ ಇವರು ಉತ್ತಮ  ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ದತ್ತು ಶಿಕ್ಷಣ ಯೋಜನೆಯಡಿ ಪದವಿ ಹಾಗೂ ಪದವಿಪೂರ್ವ ಶಿಕ್ಷಣವನ್ನು ಪಡೆದಿದ್ದಾರೆ. ಇವರುಗಳಲ್ಲಿ ಐದು ವಿದ್ಯಾರ್ಥಿಗಳು ಸಿ.ಎ. ಅಂತಿಮ ಪರೀಕ್ಷೆಯ ಗ್ರೂಪ್ -01 ಮತ್ತು ಗ್ರೂಪ್-02 ಎರಡೂ ವಿಭಾಗಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾಗಿ ಈ ಸಾಧನೆಯನ್ನು ಮಾಡಿದ್ದಾರೆ.


ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮತ್ತು ಪ್ರಾಂಶುಪಾಲ ಡಾ.ಕುರಿಯನ್, ಪದವಿಪೂರ್ವ ವಾಣಿಜ್ಯ ವಿಭಾಗದ ಪ್ರಶಾಂತ್ ಎಂ.ಡಿ ಹಾಗೂ ಸಿ.ಎ. ಸಂಯೋಜಕರಾದ ಅಪರ್ಣ ಕೆ., ಅನಂತಶಯನ, ಅಶೋಕ್ ಕೆ.ಜಿ ಅಭಿನಂದಿಸಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top