ಅಕ್ಷರ ಆರಾಧನೆ-9: ಶ್ರೀಕೃಷ್ಣನ ಪ್ರೇಮದ ರಸನಿಮಿಷಗಳು

Upayuktha
0

ಶ್ರೀಕೃಷ್ಣನ ತುಂಟಾಟಗಳನ್ನು ಸಹಿಸುತ್ತಿದ್ದರು ಗೋಪಿಯರು. ಅದರಲ್ಲಿಯೇ ಸಂತಸವನ್ನೂ ಕಾಣುತ್ತಿದ್ದರು. ಒಮ್ಮೊಮ್ಮೆ ಅವರ ಸಹನೆ ಮೀರಿದಾಗ ಅವರು ಯಶೋದೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. 


ಬಾಲಕೃಷ್ಣನು ಗೋಪಿಯರ ಮಡಕೆಗಳನ್ನು ಕಸಿದುಕೊಳ್ಳುತ್ತಿದ್ದ. ಒಮ್ಮೊಮ್ಮೆ ಅವುಗಳನ್ನು ಒಡೆದೂ ಹಾಕುತ್ತಿದ್ದ. ಗೋಪಿಯರನ್ನು ಕೃಷ್ಣ ಛೇಡಿಸಿದರೂ ಅದು ಅವರಿಗೆ ಆನಂದವನ್ನೇ ಉಂಟು ಮಾಡುತ್ತಿತ್ತು. ರಾಧೆಯ ಸಂಗಡ ಕೂಡ ಕೃಷ್ಣ ಸರಸವಾಡುತ್ತಿದ್ದ. ಯಮುನಾ ನದಿಯ ಬಳಿಯಲ್ಲಿ ಕೃಷ್ಣ ಪ್ರೇಮದ ಜಲ ತರಂಗಗಳನ್ನೇ ಎಬ್ಬಿಸುತ್ತಿದ್ದ. ರಾಧೆಯು ಕೃಷ್ಣನನ್ನು ಭೇಟಿಯಾಗಲು ಬಯಸಿದಾಗ ಉಳಿದ ಗೋಪಿಯರು ಇದಕ್ಕೆ ಪ್ರೀತಿಯಿಂದಲೇ ಅಡ್ಡಿಪಡಿಸುತ್ತಿದ್ದರು. ಇದು ರಾಧೆಯ ಮನವನ್ನು ತಲ್ಲಣಗೊಳಿಸುತ್ತಿತ್ತು.


ಕೃಷ್ಣನಂತೆ ಜನಮಾನಸವನ್ನು ಗೆದ್ದ ಇನ್ನೊಂದು ಅವತಾರ ಬಹುಶಃ ಇಲ್ಲ. ಕೃಷ್ಣನ ಮೇಲೆ ಪ್ರೀತಿ, ಅಸಹನೆ, ವ್ಯಥೆ, ಕೋಪ, ವೈರತ್ವ, ಭಕ್ತಿ, ಬಾಂಧವ್ಯ ಎಲ್ಲವೂ ವೈವಿಧ್ಯಮಯವಾಗಿಯೇ ಕಾಣುತ್ತವೆ. ಕೃಷ್ಣಾವತಾರ ನಡೆದದ್ದು ದ್ವಾಪರಯುಗದಲ್ಲಿ. ಕಲಿಯುಗ ಕಾಲಿಟ್ಟಾಗ ಕೃಷ್ಣನಿಗೆ ಎಪ್ಪತ್ತೊಂದರ ಹರೆಯ. ಅದರ ನಂತರವೂ ಮೂವತ್ತಾರು ವರ್ಷಗಳ ಕಾಲ ಆತನ ದಿವ್ಯ ಸನ್ನಿಧಾನ ಈ ಭೂಮಿಯ ಮೇಲೆ ಇತ್ತು. ಹಾಗಾಗಿ ನಮ್ಮ ಕಲಿಯುಗದಲ್ಲೂ ಕೃಷ್ಣ ಇದ್ದ ಎಂಬುದೇ ನಮಗೆ ಹೆಮ್ಮೆಯ ವಿಷಯ. ನಮ್ಮ ಹಿಂದಿನ ಜನ್ಮವೂ ಶ್ರೀಕೃಷ್ಣನ ಕಾಲದಲ್ಲೇ ಆಗಿದ್ದರೂ ಆಗಿರಬಹುದು. ಮನುಷ್ಯರಾಗಿ ಹುಟ್ಟಿ ದ್ದರೂ ಪಶುಪಕ್ಷಿಗಳಾಗಿ ಹುಟ್ಟಿದ್ದರೂ ನಮ್ಮ ಜೀವನ ಸಾರ್ಥಕವಾದಂತೆ ಅನಿಸುತ್ತದೆ.


ಅರ್ಜುನನನ್ನು ನಿಮಿತ್ತಮಾಡಿಕೊಂಡು ಜಗತ್ತಿಗೇ ಶ್ರೀಕೃಷ್ಣನು ಗೀತೆಯ ಉಪ ದೇಶ ಮಾಡಿದ. ಇದು ನಮಗಾಗಿಯೇ ಶ್ರೀಕೃಷ್ಣ ಉಪದೇಶ ಮಾಡಿದನೆಂದು ಕೊಂಡರೆ ಮನಸ್ಸಿಗೆ ಒಂದು ತರಹ ಸಂತೋಷದ ಭಾವನೆ ಮೂಡುತ್ತದೆ. ಇದೂ ಕೂಡ ನಮ್ಮ ಪೂರ್ವ ಜನ್ಮ ಪುಣ್ಯ ವಿಶೇಷವೇ ಇರಬೇಕು, ಅಲ್ಲವೇ?

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top