
ಮಂಗಳೂರು: ಮಂಗಳೂರು ನಗರದ ಹೃದಯ ಭಾಗದಲ್ಲಿ 'ಆಟಿದ ಕೂಟ'- ಮಳೆಗಾಲದ ವಿಶೇಷ ಕಾರ್ಯಕ್ರಮ ಜುಲೈ 23ರಂದು ನಡೆಯಲಿದೆ. ಪ್ರಖ್ಯಾತ ಮಾರುತಿ ಕಾರುಗಳ ಶೋರೂಂ- ಮಾಂಡೋವಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಈ ವಿಶೇಷ ಕಾರ್ಯಕ್ರಮವನ್ನು ಪ್ರಸ್ತುಪಡಿಸುತ್ತಿದೆ.
ತುಳುನಾಡಿನ ವಿಶೇಷ ಖಾದ್ಯಗಳು, ಮಳೆಗಾಲದ ತಿನಿಸುಗಳು, ಗ್ರಾಮೀಣ ತಿಂಡಿಗಳು ಸೇರಿದಂತೆ ಬಗೆಬಗೆಯ ತಿನಿಸುಗಳ ಮಳಿಗೆಗಳು, ಆಯುರ್ವೇದಿಕ್ ಹಾಗೂ ಗೃಹೋದ್ಯಮ ತಯಾರಿಕೆಯ ಉತ್ಪನ್ನಗಳ ಜತೆಗೆ ಆಹಾರ ಮೇಳ ನಡೆಯಲಿದೆ.
ಹಲಸಿನ ಹೋಳಿಗೆ, ಹಲಸಿನ ಹಣ್ಣಿನ ಐಸ್‌ಕ್ರೀಮ್ ಮತ್ತಿತರ ಸಾಂಪ್ರದಾಯಿಕ ಖಾದ್ಯಗಳು ಕೂಡ ಈ ಆಟಿದ ಕೂಟ- ಆಹಾರ ಮೇಳದಲ್ಲಿ ಇರಲಿದೆ.
ಹೆಚ್ಚಿನ ಮಾಹಿತಿಗಾಗಿ 7259014044 ಸಂಖ್ಯೆಯನ್ನು ಸಂಪರ್ಕಿಸಬಹುದು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ