ದಕ್ಷಿಣ ಕೊರಿಯಾದಲ್ಲಿ 25ನೇ ಅಂತರರಾಷ್ಟ್ರೀಯ ಜಾಂಬೂರಿ : ಕೊರಿಯಾ ಜಾಂಬೂರಿಗೆ ಆಳ್ವಾಸ್ ವಿದ್ಯಾರ್ಥಿಗಳು

Upayuktha
0

ವಿದ್ಯಾಗಿರಿ: ದಕ್ಷಿಣ ಕೊರಿಯಾದ ಜಿಯೋಲ್ಲಾದಲ್ಲಿ ಆಗಸ್ಟ್ 2 ರಿಂದ 12ರ ವರೆಗೆ 25ನೇ ಅಂತರರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿ ನಡೆಯಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 8 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.


ಆಳ್ವಾಸ್‍ನ 8 ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಟ್ಟು 48 ಸ್ಕೌಟ್ಸ್ ಮತ್ತು ಗೈಡ್ಸ್‍ಗಳು ಭಾಗವಹಿಸಲಿದ್ದಾರೆ.  


ಆಳ್ವಾಸ್ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಅನನ್ಯ, ಹತ್ತನೇಯ ತರಗತಿ ವಿದ್ಯಾರ್ಥಿಗಳಾದ ಮನುಜ ನೇಹಿಗ, ಸನ್ಮತ್ ಆಚಾರ್ಯ, ಚಿರಾಗ್ ಆಚಾರ್ಯ ಹಾಗೂ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಶಾಂಭವಿ, ಮನುಶ್ರಿ ಆನಂದ ಮೆಟ್ಟಿ, ಪವನಾ ಡಿ.ಜಿ ಮತ್ತು ಪೂರ್ಣಚಂದ್ರ ಎಂ ಪಾಲ್ಗೊಳ್ಳಲಿದ್ದಾರೆ. 


ಜಾಂಬೂರಿಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಪ್ರತಿಭಾ ಪ್ರದರ್ಶನ ನೀಡಲಿದ್ದಾರೆ. ಆಳ್ವಾಸ್‍ನ ಸ್ಕೌಟ್ ಮಾಸ್ಟರ್ ಪ್ರಕಾಶ ಎಚ್. ವಿದ್ಯಾರ್ಥಿಗಳ ತಂಡದೊಂದಿಗೆ ತೆರಳಲಿದ್ದಾರೆ. 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top