ಪುತ್ತೂರು: ಸುದಾನ ಶಾಲೆಯಲ್ಲಿ ವಿಶ್ವಪರಿಸರ ದಿನಾಚರಣೆ

Upayuktha
0

 


ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ವಿಶ್ವಪರಿಸರ ದಿನಾಚರಣೆಯನ್ನು ಜೂನ್ 5, 2023ರಂದು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿಜ್ಞಾನ ಸಂಘದ ಕಾರ್ಯದರ್ಶಿ, ಕು. ಸಾನ್ವಿ ಜೆ ರೈ (10ನೇ) ದಿನದ ಮಹತ್ವದ ಬಗ್ಗೆ ಮಾತನಾಡುತ್ತಾ ಪರಿಸರದ ಮೇಲಾಗುವ  ಪ್ರತಿಕೂಲ ಪರಿಣಾಮದ ಬಗೆಗೆ ಸವಿವರವಾಗಿ ತಿಳಿಸಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಸರ ಸಂರಕ್ಷಣೆಯನ್ನು ಹೇಗೆ ಮಾಡಬೇಕೆಂದು ತಿಳಿಯಪಡಿಸಿದರು. 


ಕು. ಸಮೃದ್ಧಿ ಕೃಷ್ಣ ಭಟ್ (ಯು.ಕೆ.ಜಿ) ಭೂಮಿಯ ಸಂರಕ್ಷಣೆಯು ಮಕ್ಕಳ ಜವಾಬ್ದಾರಿ ಎಂಬ ಪ್ರತಿಜ್ಞೆ ಮಾಡಿದರು ದೃತಿ ವಿ ಶೆಟ್ಟಿ (7ನೇ) ಮತ್ತು ರಿಯೋನಾ ವಿನೀಶಾ ವೇಗಸ್ (7ನೇ) ರವರಿಂದ ಪರಸರ ಗೀತೆಗಳ ಗಾಯನವು ನಡೆಯಿತು. ಕಾರ್ಯಕ್ರಮದ ಅಂಗವಾಗಿ ‘ತ್ಯಾಜ್ಯ ವಿಲೇವಾರಿ ಹಾಗೂ ಸ್ವಚ್ಛಭಾರತ್’ ಬಗೆಗೆ ಶಾಲಾವಿದ್ಯಾರ್ಥಿಗಳಿಗೆ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವ ಮೂಲಕ ಪರಿಸರ ಜಾಗೃತಿಯನ್ನು ಮೂಡಿಸಲಾಯಿತು. 


‘ಪ್ಲಾಸ್ಟಿಕ್ ರಹಿತ ಭೂಮಿ’ ಎಂಬ ಶೀರ್ಷಿಕೆಯಲ್ಲಿ 6ನೇ ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಶಾಲಾಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾನಾಗರಾಜ್‍ರವರು ಉಪಸ್ಧಿತರಿದ್ದರು. ಶಾಲೆಯ ವಿಜ್ಞಾನ ಸಂಘ ಅವನಿಯು ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡಿತ್ತು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top