
ಸುಳ್ಯ: ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಯ ದೃಷ್ಟಿಯಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿರುವ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ). ಸಂಸ್ಥೆಯು 2023 ರ ಸೌರಯುಗಾದಿಯ ಸಂದರ್ಭದಲ್ಲಿ ಆಯೋಜಿಸಿದ್ದ ವಿಷು ವಿಶೇಷ ಸ್ಪರ್ಧೆ2023 ಫಲಿತಾಂಶವು ಪ್ರಕಟಗೊಂಡಿದೆ. ಕತೆ, ಕವನ, ಲಘುಬರಹ, ಪ್ರಬಂಧ - ಹೀಗೆ ನಾಲ್ಕು ವಿಭಾಗದಲ್ಲಿ ನಡೆದ ಸ್ಪರ್ಧೆಗಳಿಗೆ ಅಂಚೆ ಹಾಗೂ ಮಿಂಚಂಚೆ (Email) ಮೂಲಕ ನೂರಾರು ಮಂದಿ ಭಾಗವಹಿಸಿದ್ದರು.
ವಿಜೇತರ ವಿವರ ಇಂತಿದೆ:
ಸ್ಪರ್ಧೆಗಳ ಮೌಲ್ಯಮಾಪನವನ್ನು ಡಾ| ಹರಿಕೃಷ್ಣ ಭರಣ್ಯ, ಗುರುಮೂರ್ತಿ ನಾಯ್ಕಾಪು, ಬಾಲ ಮಧುರಕಾನನ, ಪ್ರತಿಷ್ಠಾನದ ವಿಶ್ವಸ್ಥರು ಮತ್ತು ಒಪ್ಪಣ್ಣ ಬಳಗದ ಹತ್ತು ಹಿರಿಯರು ನಡೆಸಿಕೊಟ್ಟರು. ಒಪ್ಪಣ್ಣ ಬಳಗದ ಸದಸ್ಯರಾದ ಕುಮಾರಸ್ವಾಮಿ ತೆಕ್ಕುಂಜ, ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ ರವಿಶಂಕರ ದೊಡ್ಡಮಾಣಿ ಮತ್ತು ಮಹೇಶ ಎಳ್ಯಡ್ಕ ಇವರು ಸ್ಪರ್ಧಾ ಸಂಯೋಜಕರಾಗಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ