ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕರಿಂದ ದತ್ತು ಶಾಲೆಯಾದ ಸ.ಹಿ.ಪ್ರಾ.ಶಾಲೆ ಮುಂಡತ್ತೊಡ್ಡಿ ಪೆರ್ಲ, ಇಲ್ಲಿ ಗಿಡಗಳನ್ನು ನೆಟ್ಟು ಪರಿಸರ ದಿನವನ್ನು ಸೋಮವಾರ (ಜೂ.5) ಆಚರಿಸಲಾಯಿತು.
ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಸ್ವಯಂಸೇವಕ ಯಕ್ಷಿತ್ "ಕೃಷಿತೋ ನಾಸ್ತಿ ದುರ್ಭಿಕ್ಷಂ" ಅಂದರೆ ಕೃಷಿಯನ್ನು ನಂಬಿದವರು ಎಂದು ಹಾಳಾಗುವುದಿಲ್ಲ. ನಮ್ಮ ಪೂರ್ವಜರು ಪರಿಸರವನ್ನು ದೇವರಂತೆ ಕಾಣುತ್ತಿದ್ದರು. ಯಾವುದೇ ಗಿಡಗಳನ್ನು ನೆಟ್ಟರು ಅದನ್ನು ಮಕ್ಕಳಂತೆ ಪೋಷಿಸುತ್ತಿದ್ದರು. ಆಧುನಿಕರಣದ ಈ ಜಗತ್ತಿನಲ್ಲಿ ಈಗಲೂ ಪರಿಸರ ಪ್ರೇಮಿಗಳು ಇದ್ದಾರೆ ಎಂಬುದು ಸಂತಸದ ವಿಷಯ. ಮುಂದಿನ ಪೀಳಿಗೆಗಾಗಿ ಈಗಲೇ ನಮ್ಮ ಪರಿಸರವನ್ನು ಉಳಿಸಬೇಕು. ಗಿಡಮರಗಳನ್ನು ನೆಡುವುದು ಕೇವಲ ಪರಿಸರ ದಿನ, ವನಮಹೋತ್ಸವಕ್ಕೆ ಮಾತ್ರ ಸೀಮಿತವಾಗಬಾರದು. ನಿಜವಾದ ಸ್ವಯಂಸೇವಕರಿಗೆ ಪ್ರತಿದಿನವೂ ಪರಿಸರ ದಿನವಾಗಿರುತ್ತದೆ"ಎಂದರು.
ಈ ಕಾರ್ಯಕ್ರಮಕ್ಕೆ ಮುಂಡತ್ತೋಡಿ ಶಾಲೆಯ ಮುಖ್ಯೋಪಾಧ್ಯಾಯರಾದ ರಮೇಶ್ ಅವರು ಚಾಲ್ತಿ ನೀಡಿದರು. ರಾ.ಸೇ.ಯೋಜನಾ ಘಟಕದ ಸ್ವಯಂಸೇವಕರು, ಯೋಜನಾಧಿಕಾರಿ, ಶಾಲಾ ಶಿಕ್ಷಕರು ಹಾಗೂ ಮಕ್ಕಳು ಗಿಡಗಳನ್ನು ನೆಟ್ಟರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಪ್ರೊ. ದೀಪ ಆರ್.ಪಿ, ಸಾಮಾಜಿಕ ಜವಾಬ್ದಾರಿಯ ಉಪಕ್ರಮಗಳ ಸಮಿತಿ ಸದಸ್ಯರಾದ ಶ್ರೀಮತಿ ಶೃತಿ ಹಾಗೂ 20 ಸ್ವಯಂಸೇವಕರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ