'ಸಾಧನೆಗೆ ಕಲಿಕೆಯ ಜೊತೆಗೆ ಕೌಶಲ್ಯವು ಮುಖ್ಯ' - ಪೂರಣ್ ವರ್ಮ

Upayuktha
0

ಉಜಿರೆ: ವಿದ್ಯಾರ್ಥಿಗಳಿಗೆ ಸಾಧನೆಯ ಹಾದಿಯಲ್ಲಿ, ಕಲಿಕೆಯ ಜೊತೆ ಕೌಶಲ್ಯವೂ ಮುಖ್ಯವಾಗಿರುತ್ತದೆ, ಯಶಸ್ಸಿಗೆ ಓದು ಮಾತ್ರವಲ್ಲದೆ, ಬೇರೆ ಚಟುವಟಿಕೆಗಳೂ ಅಗತ್ಯ. ವಿವಿಧ ಸ್ಪರ್ಧೆಗಳಲ್ಲಿ ಭಾಗವಿಸುವುಕೆಯಿಂದಾಗಿ ಕೌಶಲ್ಯ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಐ.ಟಿ ಮತ್ತು ವಿದ್ಯಾರ್ಥಿ ನಿಲಯದ ಸಿ.ಇ.ಒ ಪೂರಣ್ ವರ್ಮ ನುಡಿದರು.

  

ಶ್ರೀ ಧ.ಮಂ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಬಿ.ವೋಕ್ ವಿಭಾಗವು ಆಯೋಜಿಸಿದ್ದ 'ಬಿ.ವೋಕ್ ಉತ್ಸವ'ದಲ್ಲಿ ಅತಿಥಿಯಾಗಿ ಮಾತನಾಡಿದರು.

  

ಆ್ಯಪ್ ಮತ್ತು  ಸಾಫ್ಟ್‍ವೇರ್‍ಗಳ ಬೇಡಿಕೆ ದಿನ-ದಿನಕ್ಕೆ ಹೆಚ್ಚಾಗುತ್ತಿದೆ, ಎಲ್ಲಾ ಚಟುವಟಿಕೆಗಳು ಅದರಲ್ಲೇ ನಡೆಯುತ್ತಿವೆ. ಡಿಜಿಟಲ್ ಮೀಡಿಯಾವನ್ನು ಅತೀ ಹೆಚ್ಚು ನಟರು ಬಳಸಿಕೊಳ್ಳುತ್ತಾರೆ. ಇದರಲ್ಲಿ ಹೆಚ್ಚಿನ ಉಪಯೋಗ ಇರುವುದರಿಂದ ಡಿಜಿಟಲ್ ಮೀಡಿಯಾದ ಕೌಶಲ್ಯಗಳನ್ನು ಅರಿತುಕೊಂಡಂತಾಗುತ್ತದೆ. 


ಸ್ಪರ್ಧೆಯಲ್ಲಿ  ಗೆದ್ದರೆ ಖುಷಿ ಸಿಗುತ್ತದೆ. ಸೋತರೆ ಕೌಶಲ್ಯ ಹೆಚ್ಚು ಬೆಳೆಯುತ್ತದೆ. ಸ್ಪರ್ಧೆ ಇದ್ದರೆ ನಮ್ಮ ಜೀವನವನ್ನು ಮುನ್ನಡೆಸಲು ಸಾಧ್ಯ ಎಂದರು.

   

ಮುಖ್ಯ ಅತಿಥಿಯಾಗಿ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಮೋದ್ ಕುಮಾರ್ ಬಿ. ಮಾತನಾಡಿ, 

 

ಬಿ.ವೋಕ್ ಉತ್ಸವ' ಕಾರ್ಯಕ್ರಮವು ವಿಶಿಷ್ಟವಾಗಿ ಮೂಡಿ ಬಂದಿದೆ. ಸಿಕ್ಕ ಅವಕಾಶವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಅರ್ಥಪೂರ್ಣವಾದ ಕಾರ್ಯಕ್ರಮ ಇದಾಗಿದೆ ಎಂದು ಅಭಿಪ್ರಾಯಪಟ್ಟರು.

  

ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ್ ಪಿ. ಮಾತನಾಡಿ ಸ್ಪರ್ಧೆಗಳ ವಿವಿಧ ಆಯಾಮಗಳ ಜೊತೆಗೆ ಕೌಶಲ್ಯಗಳು ಮುಖ್ಯವಾಗುತ್ತದೆ ಎಂದರು. 


ಸ್ಪರ್ಧೆ ಎನ್ನುವುದು ಎಲ್ಲಾ ಕಡೆಯೂ ಇದೆ. ಪಠ್ಯ ಜ್ಞಾನದ ಜೊತೆಗೆ ಕೌಶಲ್ಯಗಳು ದೊರೆಯುತ್ತವೆ. ಜೀವನವನ್ನು ನಡೆಸಲು ಉತ್ತಮ ಉದ್ಯೋಗವು ಮುಖ್ಯ ಇದಕ್ಕೆ ಪೂರಕವಾಗಿ ಕೌಶಲ್ಯಗಳು ಮುಖ್ಯವಾಗುತ್ತವೆ. ಇಂತಹ ಫೆಸ್ಟ್‍ಗಳಲ್ಲಿ ಏರ್ಪಡಿಸಿದ ಚಟುವಟಿಕೆಗಳು ಮುಂದಿನ ಉದ್ಯೋಗಕ್ಕೆ ಅನುಕೂಲವಾಗುತ್ತದೆ ಎಂದು ನುಡಿದರು.

  

ಪ್ರೊ. ಎಸ್.ಎನ್. ಕಾಕತ್ಕರ್ ಅಧ್ಯಕ್ಷತೆ ವಹಿಸಿ ಹೆಚ್ಚಿನ ಕೌಶಲ್ಯಯುತ ಚಟುವಟಿಕೆಗಳಿಗೆ ಎಸ್.ಡಿ.ಎಂ ಆದ್ಯತೆ ನೀಡುತ್ತದೆ ಎಂದರು.  

 

ಇದು ಸಮುದ್ರ ಇದ್ದ ಹಾಗೆ. ಕಷ್ಟ ಪಟ್ಟರೆ ಇಷ್ಟ ಪಟ್ಟಿದ್ದು ದೊರೆಯುತ್ತದೆ ಎನ್ನುವುದಕ್ಕೆ ಬಿ.ವೋಕ್ ಉತ್ಸವ ಕಾರಣ. ಸಕಾರಾತ್ಮಕ ಅಲೋಚನೆಗಳು ಮುಖ್ಯವಾಗಿರಲಿ ಮತ್ತು ಆಶಾದಾಯಕವಾಗಿರಲಿ ಎಂದರು.

   

ಕಾರ್ಯಕ್ರಮದಲ್ಲಿ ಇಂಟರ್ ನ್ಯಾಷ್‍ನಲ್ ಕಾನ್ಫರೆನ್ಸ್ ಲೋಗೋ ಬಿಡುಗಡೆಗೊಳಿsಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ 30 ಕ್ಕಿಂತಲೂ ಹೆಚ್ಚಿನ ಕಾಲೇಜುಗಳು ಭಾಗವಹಿಸಿ, ಎಸ್.ಡಿ.ಎಂ ಲಾ ಕಾಲೇಜ್ ಮಂಗಳೂರು ಪ್ರಥಮ ಸ್ಥಾನ, ಆಳ್ವಾಸ್ ಕಾಲೇಜು ಮೂಡಬಿದಿರೆ ದ್ವಿತೀಯ ಸ್ಥಾನ ಪಡೆದುಕೊಂಡೆದುಕೊಂಡವು. ಕಾರ್ಯಕ್ರಮದಲ್ಲಿ ಸುವೀರ್ ಜೈನ್, ಮಾಧವ ಹೊಳ್ಳ, ಅಶ್ವಿನ್ ಪಾಲ್ಗೊಂಡಿದ್ದರು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮಾಧುರಿ ಗೌಡ ಸ್ವಾಗತಿಸಿ, ಶಶಾಂಕ್ ಬಿ.ಎಸ್ ವಂದಿಸಿ, ಪ್ರವೀಣ್. ಡಿ ನಿರೂಪಿಸಿದರು.

ವರದಿ: ಚೆಲುವಮ್ಮ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top