ಸಾಮಾಜಿಕ ಜವಾಬ್ದಾರಿಯೊಂದಿಗೆ ನಾಯಕತ್ವ ಕಲಿಸುವುದೇ ಎನ್.ಎಸ್.ಎಸ್ - ಪ್ರಥ್ವೀಶ ಧರ್ಮಸ್ಥಳ

Upayuktha
0

 


ಉಜಿರೆ: ರಾಷ್ಟ್ರೀಯ ಸೇವಾ ಯೋಜನೆಯು ಯುವ ಮನಸ್ಸುಗಳ ಕ್ರಿಯಾತ್ಮಕ ಸಂಘಟನೆ. ಇದು ಸಹಬಾಳ್ವೆ, ಪರೋಪಕಾರ ಗುಣ, ಸೇವಾ ಮನೋಭಾವನೆ ಬೆಳೆಸುತ್ತದೆ. ಸೇವೆ ಹಾಗೂ ತ್ಯಾಗ ಇದರ ಸಂದೇಶ. ಗಾಂಧೀಜಿಯವರ ಹಾಗೂ ಸ್ವಾಮಿ ವಿವೇಕಾನಂದರ ಚಿಂತನೆಗಳು ಇಲ್ಲಿವೆ.  ಸಾಮಾಜಿಕ ಜವಾಬ್ದಾರಿಯೊಂದಿಗೆ ನಾಯಕತ್ವ ಕಲಿಸುವುದೇ ಈ ಎನ್.ಎಸ್.ಎಸ್ ಎಂದು ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ವಿದ್ಯಾರ್ಥಿ ಹಾಗೂ ರಾ. ಸೇ. ಯೋಜನೆಯ ಹಿರಿಯ ಸ್ವಯಂ ಸೇವಕ ಪ್ರಥ್ವೀಶ ಧರ್ಮಸ್ಥಳ ಹೇಳಿದರು.


ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆದ ಪ್ರಶಿಕ್ಷಣ ಶಿಬಿರದಲ್ಲಿ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದರು. 


ಸೇವಾ ಮನೋಭಾವನೆ ಬೆಳೆಸಿಕೊಳ್ಳುವುದರೊಂದಿಗೆ ನಾಯಕತ್ವ ಗುಣಗಳನ್ನು ಈ ಸಂಘಟನೆಯಿಂದ ಕಲಿಯಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು. 


ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್  ಗೌರವಿಸಿದರು. 

ಸುದರ್ಶನ ನಾಯಕ್ ಸ್ವಾಗತಿಸಿ, ದಕ್ಷಾ ವಂದಿಸಿದರು. ಅಕ್ಷತಾ ಎಂ.ಜಿ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter    

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top