ವೈಯಕ್ತಿಕ ಜಿದ್ದಿನಿಂದ ರಸ್ತೆಗೆ ಬೇಲಿ ಹಾಕಿದ ಕುಟುಂಬಗಳು
ಉಡುಪಿ: ಉಡುಪಿಯ ದೊಡ್ಡನಗುಡ್ಡೆ ಆದಿಶಕ್ತಿ ದೇವಾಲಯದಿಂದ ಕೆಳಭಾಗಕ್ಕೆ ಲಯನ್ಸ್ ಮಾರ್ಗದಲ್ಲಿ ಬಂದಾಗ ಒಂದು ಹೊಸ ಸೇತುವೆ ರಚನೆಯಾಗಿದೆ. ಈ ಭಾಗದಿಂದ ಸಗ್ರಿ ಶಾಲೆಗೆ ಬರಲು ಕೇವಲ 400 ಮೀಟರ್ ದೂರ. ಕಳೆದ ಎರಡು ಮೂರು ವರ್ಷ ಸೇತುವೆಯಿಂದ ಮುಂದಕ್ಕೆ 150 ಅಡಿ ಉದ್ದಕ್ಕೆ ಮಣ್ಣಿನ ಮಾರ್ಗ ಮತ್ತು ಮುಂದಕ್ಕೆ ಡಾಮರ್ ರಸ್ತೆ ಇತ್ತು. ಈಗ ಹೊಸ ಸೇತುವೆ ಆದ ನಂತರ ಮಣ್ಣಿನ ಮಾರ್ಗವನ್ನು ಕಲ್ಲಿನ ಕಂಬ ಅಳವಡಿಸಿ ಮುಚ್ಚಲಾಗಿದೆ. ಮಾರ್ಗ, ಸೇತುವೆ ಮುಂತಾದುವು ಇರುವುದು ಜನರ ಸಂಚಾರಕ್ಕಾಗಿ, ಮತ್ತು ಸೌಕರ್ಯಕ್ಕಾಗಿ. ಇರುವ ಸೇತುವೆಯನ್ನು ಮುರಿದು, ಹೊಸ ಸೇತುವೆ ನಿರ್ಮಿಸಿದಾಗ ಮಾರ್ಗಕ್ಕೆ ಕಲ್ಲು ಕಂಬದ ಬೇಲಿ ಹಾಕಿ ಸಂಚಾರ ಸ್ವಾತಂತ್ರ್ಯ ಹರಣ ಮಾಡಿದ, ವಿಷಯ ತಿಳಿದೂ ಮೌನವಹಿಸಿದ ಪುರಸಭೆ, ಜಿಲ್ಲಾಧಿಕಾರಿಗಳ ಆಸಾಮರ್ಥ್ಯಗಳಿಗೆ ಏನು ಹೇಳಲಿ?
ಶಿವಪಾಡಿ ದೇವಳದ ಬ್ರಹ್ಮ ಕಲಶದ ಸಂದರ್ಭ ಆಗಿನ ಶಾಸಕ ರಘುಪತಿ ಭಟ್ಟರ ಗಮನಕ್ಕೆ ಈ ವಿಚಾರ ತಿಳಿಸಲಾಗಿತ್ತು. ಆ ಕಾರ್ಯಕ್ರಮಗಳು ಮುಗಿದ ನಂತರ ಮಾಡೋಣ ಅಂದಿದ್ದರು. ಎರಡು ತಿಂಗಳ ಮೇಲಾಯಿತು. ಈಗಲೂ ರಸ್ತೆ ತಡೆ ನಿವಾರಿಸಿಲ್ಲ. ಈಗ ರಘುಪತಿ ಭಟ್ಟರು ಈಗ ಎಂಎಲ್ಎ ಆಗಿ ಉಳಿದಿಲ್ಲ. ಹೊಸ ಶಾಸಕರಿಗೆ ಇನ್ನೂ ಸ್ಥಳೀಯ ಸಮಸ್ಯೆಯ ಅರಿವಾಗಿಲ್ಲ.
ಹಳೆ ಸೇತುವೆ ಹದಿನೇಳು ವರ್ಷ ಉಪಯೋಗ ಶೂನ್ಯವಾಗಿತ್ತು. ಎರಡು ವರ್ಷ ಹಿಂದೆ ರಘುಪತಿ ಭಟ್ಟರು ಸಂಧಾನ ನಡೆಸಿ 12 ಅಡಿ ಮಣ್ಣಿನ ಮಾರ್ಗ ಊರ್ಜಿತಗೊಳಿಸಿದರು. ಸ್ಕೂಟರ್, ಕಾರು, ಲಾರಿ ಹೋಗಲು ಅನುಕೂಲವಾಗಿತ್ತು. ಆರು ತಿಂಗಳ ಹಿಂದೆ ಹಳೆ ಸೇತುವೆ ಮುರಿದು ಹೆಚ್ಚು ಅಗಲದ ಹೊಸ ಸೇತುವೆ ಕಟ್ಟಿದರು. ಈಗ ಹಳೆ ಸೇತುವೆ ಇಲ್ಲ.ಮಣ್ಣಿನ ಮಾರ್ಗ ಬಂದ್ ಮಾಡಲಾಗಿದೆ. ಇದಕ್ಕೆ ಕಾರಣ ಎರಡು ಮನೆಗಳ ಇಗೋ ಕ್ಲಾಷ್ ಅಷ್ಟೆ. ಮಣ್ಣಿನ ಮಾರ್ಗದುದ್ದಕ್ಕೂ ಕಲ್ಲು ಕಂಬ, ತಂತಿ ಬೇಲಿ ಜಡಿದು ನಡೆದು ಹೋಗಲೂ ಕಷ್ಟವಾಗಿದೆ.
ಒಂದೇ ರಾಜಕೀಯ ಬಣಕ್ಕೆ ಸೇರಿದ ಎರಡು ಮನೆಗಳು. ಈಗಾಗಲೇ ಕಟ್ಟಿದ ಕಾಂಪೌಂಡ್ ಗೋಡೆ ತೆಗೆದು ಮಾರ್ಗ ವಿಸ್ತಾರಕ್ಕೆ ಜಾಗ ಕೊಡಬೇಕು ಅಂತ ಒಬ್ಬರ ಹಠ. ಕಾಂಪೌಂಡ್‌ನ ಹೊರಗಿನಿಂದ ಮಾರ್ಗ ಕೊಡುತ್ತೇನೆ ಅಂತ ಮತೊಬ್ಬರ ಕೇಳಿಕೆ. ವಿಷಯ ಹೇಗೂ ಇರಲಿ. ಎರಡು ವರ್ಷದಿಂದ ಊರ್ಜಿತವಿದ್ದ ರಸ್ತೆಗೆ ಕಬ್ಬಿಣದ ತಂತಿ ಬೇಲಿ ಹಾಕುವುದು ಸಮಂಜಸವೇ? ಹೊಸ ಸೇತುವೆ ನಿರ್ಮಾಣ ಮಾಡಿದ್ದು ಯಾವ ಪುರುಷಾರ್ಥಕ್ಕೆ?
ಹಳೇ ಸೇತುವೆ ಕಟ್ಟಿ ಹದಿನೇಳು ವರ್ಷ ಮಾರ್ಗ ಇರಲಿಲ್ಲ. ಎರಡು ವರ್ಷ ಹಿಂದೆ ಮಾತುಕತೆ ಮಾಡಿ ಮಣ್ಣಿನ ಮಾರ್ಗ ಊರ್ಜಿತಗೊಂಡಿತ್ತು. ಆರು ತಿಂಗಳ ಹಿಂದೆ ಹೊಸ ಸೇತುವೆ ಕಟ್ಟಿದ ನಂತರ ಇದ್ದ ಮಾರ್ಗವೂ ಇಲ್ಲದಂತಾಗಿದೆ. ಇದೀಗ ರಸ್ತೆ ಪೂರ್ತಿಯಾಗಿ ಕಂಬ ಮತ್ತು ತಂತಿ ಬೇಲಿ ಹಾಕಿ ಮುಚ್ಚಿದ್ದಾರೆ. ಸ್ಥಳೀಯರ ಹೇಳಿಕೆ ಪ್ರಕಾರ, ಇಲ್ಲಿ ಎರಡು ಕುಟುಂಬಗಳ ವೈಯಕ್ತಿಕ ಜಿದ್ದಾಜಿದ್ದಿಯೇ ಸಮಸ್ಯೆಗೆ ಮೂಲವಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ. ಸ್ಥಳೀಯ ಪುರಸಭಾ ಸದಸ್ಯರು ಬಹಳಷ್ಟು ಪ್ರಯತ್ನಿಸಿದರೂ ಸಮಸ್ಯೆ ಬಗೆಹರಿದಿಲ್ಲ.
ಹದಿನೇಳು ವರ್ಷದ ಹಿಂದ ಒಂದ ಸಂಕ ಕಟ್ಟಿದ್ದು ಅದರ ಉಪಯೋಗ ಸಾರ್ವಜನಿಕರಿಗೆ ಒದಗಲಿಲ್ಲ. ಎರಡು ವರ್ಷ ಹಿಂದೆ ಹದಿನೈದು ಅಡಿ ಅಗಲದ ಮಣ್ಣಿನ ರಸ್ತೆ ಮಾಡಿ ಆದಿ ಶಕ್ತಿ ದೇವಳದ ಕೆಳಗಿನಿಂದ ಸಗ್ರಿ ಶಾಲೆ ಕಡೆ ಜನ, ಕಾರು, ಸ್ಕೂಟರ್, ಬೈಕ್‌ಗಳಲ್ಲಿ ಓಡಾಡುತ್ತಿದ್ದರು. ಸಗ್ರಿ ಶಾಲೆಯಿಂದ ಸುತ್ತಿ ಬಳಸಿ ಆದಿ ಶಕ್ತಿ ದೇವಳಕ್ಕೆ 4 ಕಿ.ಮೀ ಸುತ್ತು ಬಳಸಿ ಹೋಗುವ ಬದಲು ಅರ್ಧ ಕಿ.ಮೀನಲ್ಲಿ ಹೋಗಬಹುದಿತ್ತು. ಈಗ ಆರು ತಿಂಗಳ ಹಿಂದೆ ಹಳೇ ಬ್ರಿಡ್ಜ್ ಮುರಿದು ಹೊಸ ಅಗಲದ ಬ್ರಿಡ್ಜ್ ಕಟ್ಟಿದ್ದಾರೆ. ಆದರೆ ಈಗ ಇದ್ದ ಮಾರ್ಗಕ್ಕೆ ಶಿಲಾ ಕಂಬಗಳನ್ನು ಉದ್ದಕ್ಕೆ ನೆಟ್ಟು ಮಾರ್ಗ ಶಾಶ್ವತವಾಗಿ ಮುಚ್ಚಲಾಗಿದೆ. ಲಕ್ಷಗಟ್ಟಲೆ ದುಡ್ಡು ಸುರಿದು ಬ್ರಿಡ್ಜ್ ಕಟ್ಟಿ ಇದ್ದ ಮಣ್ಣಿನ ಮಾರ್ಗಕ್ಕೂ ಸಂಚಕಾರ ಬಂದಿದೆ. ಅಂದು ಶಾಸಕರಾಗಿದ್ದ ರಘುಪತಿ ಭಟ್ಟರ ಗಮನಕ್ಕೆ ಈ ವಿಷಯ ತಂದರೂ ಚುನಾವಣೆ ಸಮಯದಲ್ಲಿ ಅವರು ಹೆಚ್ಚು ಗಮನ ಕೊಡಲಿಲ್ಲ. ಜಿಲ್ಲಾಧಿಕಾರಿಗಳ ವರೆಗೆ ವಿಷಯ ಹೋದರೂ ಈ ವರೆಗೆ ಸಮಸ್ಯೆಗೆ ಪರಿಹಾರ ಕಾಣಲಿಲ್ಲ. ಪೊಲೀಸ್ ಇಲಾಖೆಯೂ ಮೌನವಾಗಿದೆ.
ರಸ್ತೆಯನ್ನು ಬಳಸುತ್ತಿದ್ದ ಸ್ಥಳೀಯ ಸಾರ್ವಜನಿಕರು ಸಂಘಟಿತರಾಗಿ ಅಡೆತಡೆ ಉಂಟುಮಾಡುವವರನ್ನು ಪ್ರಶ್ನಿಸಿದರೆ ಸಮಸ್ಯೆ ಸುಲಭವಾಗಿ ಬಗೆಹರಿಯಬಹುದು ಎಂಬುದು ಪ್ರಜ್ಞಾವಂತರ ಅಭಿಮತವಾಗಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ


