ಉಡುಪಿ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದವತಿಯಿಂದ ಪ್ರಸಕ್ತಸಾಲಿನಲ್ಲಿ ಎನ್.ಎಮ್.ಡಿ.ಎಫ್.ಸಿ ಮಾದರಿಯಲ್ಲಿ ವಿದೇಶದಲ್ಲಿ ವ್ಯಾಸಂಗ ಮಾಡಲು ಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮತ್ತು ಮಾನ್ಯತೆ ಪಡೆದಿರುವ ಯಾವುದೇ ವಿದೇಶವಿದ್ಯಾಲಯದಿಂದ ಭಾರತದೇಶದ ಪ್ರತಿಷ್ಟಿತ ಐ.ಐ.ಟಿ.ಎಸ್, ಐ.ಐ.ಎಮ್.ಎಸ್. ಹಾಗೂ ಐ.ಎಸ್.ಸಿ ಸಂಸ್ಥೆಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಮಾಡಬಯಸುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಂದ ವಿದೇಶಿವಿದ್ಯಾಭ್ಯಾಸ ಸಾಲಯೋಜನೆಯ ಸೌಲಭ್ಯಪಡೆಯಲು ನಿಗಮದ ವೆಬ್‌ಸೈಟ್ kmdconline.karnataka.gov.inನಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿನಿಗಮ, ಮೌಲಾನಾಅಜಾದ್ ಭವನ, 1ನೇಮಹಡಿ, ಪಶುಚಿಕಿತ್ಸಾಲಯದ ಹತ್ತಿರ, ಅಲೆವೂರುರಸ್ತೆ, ಶಿವಳ್ಳಿಗ್ರಾಮ, ಮಣಿಪಾಲ ಉಡುಪಿ, ದೂರವಾಣಿಸಂಖ್ಯೆ:0820-2574990, ಸಹಾಯವಾಣಿಸಂಖ್ಯೆ 8277799990 ಮತ್ತು ಉಡುಪಿ ದೂರವಾಣಿಸಂಖ್ಯೆ: 0820-2574596, ಕಾರ್ಕಳದೂರವಾಣಿಸಂಖ್ಯೆ: 08258-231101 ಹಾಗೂ ಕುಂದಾಪುರ ದೂರವಾಣಿಸಂಖ್ಯೆ: 08254-230370 ತಾಲೂಕು ಅಲ್ಪಸಂಖ್ಯಾತರ ಮಾಹಿತಿಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ನಿಗಮದ ಜಿಲ್ಲಾವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ