ಉಡುಪಿ: ಬೀಟ್ ದಿ ಪ್ಲಾಸ್ಟಿಕ್ ಜಾಗೃತಿ ಅಭಿಯಾನ

Upayuktha
0

 

ಉಡುಪಿ: ರಾಜ್ಯದ ಕರಾವಳಿ ಭಾಗದಲ್ಲಿ "ಪ್ಲಾಸ್ಟಿಕ್ ಅನ್ನು ತಿರಸ್ಕರಿಸಿ, ಕಡಿಮೆ ಮಾಡಿ, ಮರುಬಳಕೆ ಮಾಡಿ ಮತ್ತು ಮರುಬಳಕೆ ಮಾಡಿ"  ಎಂಬ ವಿಶಿಷ್ಟ ಘೋಷಣೆಯೊಂದಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, NCC UDAAN ಸಹಯೋಗದಲ್ಲಿ ಮೇ 27 ರಂದು ಕಾರವಾರದಿಂದ ಆರಂಭವಾದ ಬೀಟ್ ದಿ ಪ್ಲಾಸ್ಟಿಕ್ ಜಾಗೃತಿ ಅಭಿಯಾನ ಯಾತ್ರೆಯು ಕರಾವಳಿಯ ವಿವಿಧ ಭಾಗಗಳಿಗೆ ಸಂಚರಿಸಿದ್ದು,ಇದುವರೆಗೆ ಕಾರವಾರ, ಗೋಕರ್ಣ, ಕುಮಟಾ, ಹೊನ್ನಾವರ, ಮುರ್ಡೇಶ್ವರ, ಬೈಂದೂರು, ಮರವಂತೆ, ಕೆಮ್ಮಣ್ಣು ಹೊಡೆಯಲ್ಲಿ ಸ್ವಚ್ಛತೆಯನ್ನು ಕೈಗೊಂಡಿದೆ.  


ಕಾಪು ನಲ್ಲಿ ನಡೆದ ಅಭಿಯಾನದಲ್ಲಿ ಮಾತನಾಡಿದ, ಉಡುಪಿ ಪರಿಸರ ಅಧಿಕಾರಿ ಡಾ.ರಾಜು "ಪ್ಲಾಸ್ಟಿಕ್ ಅನ್ನು ನಿರಾಕರಿಸು, ಕಡಿಮೆ ಮಾಡಿ, ಮರುಬಳಕೆ ಮಾಡಿ, ಮರುಬಳಕೆ ಮಾಡಿ, ಕೇವಲ ಘೋಷಣೆಗಳಾಗಬಾರದು, ಅದು ನಮ್ಮ ಜೀವನದ ತತ್ವವಾಗಬೇಕು ಎಂದರು.


ಈ ಅಭಿಯಾನ ಕಾರ್ಯಕ್ರಮಕ್ಕೆ ವಿವಿಧ ಸ್ವಯಂ ಸೇವಾ ಸಂಘಟನೆಗಳು, ಓಉಔ ಗಳು.ಸ್ವಿಮ್ಮರ್ಸ್ ಫೌಂಡೇಶನ್ ಮತ್ತು ಅದಾನಿ ಪವರ್ ಲಿಮಿಟೆಡ್, ಬ್ರೈಟ್ ಫ್ಲೆಕ್ಸಿ ಇಂಟನ್ರ್ಯಾಷನಲ್ ಪ್ರೈವೇಟ್ ಮುಂತಾದ ಉದ್ಯಮಗಳು ಬೆಂಬಲವನ್ನು ನೀಡಿದ್ದು, NCC UDAAN ಕರ್ನಾಟಕ ವಿಭಾಗದ ರಾಜ್ಯ ಕಾರ್ಯದರ್ಶಿ, ಸುನಿಲ್ ಕೆ.ಜಿ ಸಹಕರಿಸಿದ್ದಾರೆ.


ಎನ್‍ಸಿಸಿ ಕೆಡೆಟ್‍ಗಳು, ಕೋಸ್ಟಲ್ ಗಾರ್ಡ್‍ಗಳು, ನೌಕಾಪಡೆಯ ಅಧಿಕಾರಿಗಳು, ಕೈಗಾರಿಕಾ ಕಾರ್ಯಕರ್ತರು, ಎನ್‍ಜಿಒಗಳು ಮತ್ತು ಸಾರ್ವಜನಿಕರನ್ನು ಒಳಗೊಂಡ 3000 ಕ್ಕೂ ಹೆಚ್ಚು ಸ್ವಯಂಸೇವಕರ ಬೆಂಬಲದೊಂದಿಗೆ ಈ ಅಭಿಯಾನದಲ್ಲಿ ಇದುವರೆಗೆ, ಸುಮಾರು 6.5 ಟನ್‍ಗಳನ್ನು ಪ್ಲಾಸ್ಟಿಕ್ ಸಂಗ್ರಹಿಸಲಾಗಿದ್ದು, ಜೂನ್ 5 ರಂದು ನಡೆಯುವ ವಿಶ್ವ ಪರಿಸರ ದಿನದಂದು ಬೈಕಂಪಾಡಿ ಮತ್ತು ಪಣಂಬೂರು ಬೀಚ್ ನಲ್ಲಿ ಈ ಜಾಗೃತಿ ಅಭಿಯಾನ ಕೊನೆಗೊಳ್ಳಲಿದೆ ಎಂದು ಪ್ರಕಟಣೆ  ತಿಳಿಸಿದೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top