ಐರ್ಲೇಂಡ್‌ನಲ್ಲಿ ತುಳುನಾಡ ಸಂಘ ಸ್ಥಾಪನೆ

Upayuktha
0

ಡಬ್ಲಿನ್: ಐರ್ಲೇಂಡ್‌ನ ಡಬ್ಲಿನ್‌ನಲ್ಲಿ ಐರೀಶ್ ತುಳುನಾಡ ಸಂಘ ಸ್ಥಾಪನೆಯನ್ನು ಇತ್ತೀಚೆಗೆ ನಡೆಸಲಾಯಿತು. ಡಬ್ಲಿನ್‌ನ ಸುತ್ತಮತ್ತಲಿರುವ ತುಳುವರು ಜತೆಯಾಗಿ ಈ ನೂತನ ಸಂಘವನ್ನು ಸ್ಥಾಪಿಸಿದ್ದಾರೆ. ನೂತನ ಸಂಘಕ್ಕೆ ಗುಣಶೀಲ ಶೆಟ್ಟಿ, ಸ್ಟೆಲ್ಲಾ ಕಾರ್ಡೋ, ಮೋಹನ್ ಮತ್ತು ಹೇಮಲತಾ ದೀಪ ಬೆಳಗಿಸಿ ಉದ್ಘಾಟಿಸಿ, ಚಾಲನೆ ನೀಡಿದರು.

ಐರ್ಲೇಂಡ್‌ನಲ್ಲಿ ನೆಲೆಯಾಗಿರುವ ಕರಾವಳಿಯ ನಿವಾಸಿಗರಿಗೆ ಒಂದು ಉತ್ತಮ ವೇದಿಕೆಯನ್ನು ನಿರ್ಮಾಣ ಮಾಡಿಕೊಡುವುದು, ಇಲ್ಲಿನ ಸಂಸ್ಕೃತಿ, ಆಚಾರ, ವಿಚಾರಗಳನ್ನು ವಿನಿಮಯ ಮಾಡಿಕೊಡುವುದು ಮತ್ತು ಅಲ್ಲಿರುವ ಎಲ್ಲಾ ಭಾರತೀಯರನ್ನು ಒಗ್ಗೂಡಿಸಿ ಐಕ್ಯತೆಯಿಂದ ಕಾರ್ಯನಿರ್ವಹಿಸುವುದು ಸಂಘದ ಪ್ರಮುಖ ಉದ್ದೇಶಗಳಾಗಿವೆ. ಕರಾವಳಿಯ ಆಹಾರ ಪದ್ಧತಿ, ತುಳುನಾಡಿನ ಸಿನಿಮಾ, ನಾಟಕ, ಯಕ್ಷಗಾನ ಸೇರಿದಂತೆ ನಾನಾ ಕಲಾ ಪ್ರಕಾರಗಳನ್ನು ಅಲ್ಲಿ ಪ್ರಚುರ ಪಡಿಸುವ ಕೆಲಸವನ್ನು ಕೂಡ ಸಂಘ ಮಾಡಲಿದೆ. ಒಟ್ಟಿನಲ್ಲಿ ಬಹುಸಂಸ್ಕೃತಿಯ ನೆಲೆಯಲ್ಲಿ ಈ ಸಂಘ ಡಬ್ಲಿನ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ನೂತನ ಸಂಘಕ್ಕೆ ವೀಡಿಯೋ ಸಂದೇಶದ ಮೂಲಕ ಕೋಸ್ಟಲ್‌ವುಡ್‌ನ ನಟ, ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್, ಕನ್ನಡದ ಸಂಗೀತ ನಿರ್ದೇಶಕ ಗುರುಕಿರಣ್, ಡಾಯ್ಜಿವರ್ಲ್ಡ್ ಮೀಡಿಯಾದ ಮ್ಯಾನೇಜಿಂಗ್ ನಿರ್ದೇಶಕ, ಕಲಾವಿದ ವಾಲ್ಡರ್ ನಂದಳಿಕೆ, ನಟ ಪ್ರಕಾಶ್ ತುಮಿನಾಡು, ಶಿವಧ್ವಜ್, ರೂಪಶ್ರೀ ವರ್ಕಾಡಿ, ವಿಜಯ ಶೋಭರಾಜ್ ಪಾವೂರು, ಹಿನ್ನೆಲೆ ಗಾಯಕ ರಮೇಶ್ಚಂದ್ರ ಶುಭ ಕೋರಿದರು.

ಇಲಿಯಾಸ್ ಹುಸೈನ್, ಸಜಿತ್ ಶೆಟ್ಟಿ, ಚೈತ್ರಾ ಶೆಟ್ಟಿ, ಗೌತಮ್ ಶೆಟ್ಟಿ, ಪ್ರಾರ್ಥನಾ ರೈ ಕಾರ್ಯಕ್ರಮ ಆಯೋಜನೆಗೆ ಸಾಥ್ ನೀಡಿದರು. ಇಲಿಯಾಸ್ ಹುಸೈನ್ ಕಾರ್ಯಕ್ರಮ ನಿರೂಪಿಸಿದರು. ಚೈತ್ರಾ ಶೆಟ್ಟಿ ವಂದಿಸಿದರು. ಸುಧಾ ಗುರುನಂದನ್ ಪ್ರಾರ್ಥಿಸಿದರು. ಬಳಿಕ ಸಂಗೀತ ರಸಮಂಜರಿ ನಡೆಯಿತು.

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
To Top