ತುಳುವಿಗೆ ರಾಜ್ಯ ಭಾಷೆಯ ಸ್ಥಾನ ಸಿಗಬೇಕು: ಒಡಿಯೂರು ಶ್ರೀ

Upayuktha
0

ಮಂಗಳೂರು: ತುಳು ಭಾಷೆ ಸುಲಲಿತ ಭಾಷೆ. ಅದಕ್ಕೆ ಮತ- ಧರ್ಮದ ಹಂಗಿಲ್ಲ. ಯಾರು ಕೂಡ ಮಾತನಾಡಬಹುದು.‌ ಬೇರೆ ಭಾಷೆಗಳಿಗಿಂತ ಸುಲಲಿತ ಅನ್ನುವ ಕಾರಣಕ್ಕೆ ತುಳುವನ್ನು ಸುಲಭವಾಗಿ ಕಲಿತು ಮಾತನಾಡುತ್ತಾರೆ. ‌ಇಂತಹ ತುಳು ಭಾಷೆಗೆ ರಾಜ್ಯ ಭಾಷೆಯೆಂಬ ಸ್ಥಾನ ಸಿಗಬೇಕು. ತುಳು ಭಾಷೆ ಸಂವಿಧಾನದ ಎಂಟನೇ ಪರಿಚ್ಚೇದಕ್ಕೆ ಸೇರಬೇಕು ಎನ್ನುವುದು ನಮ್ಮೆಲ್ಲರ ಅಪೇಕ್ಷೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.


ಮಂಗಳೂರು ವಿಶ್ವವಿದ್ಯಾನಿಲಯ, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮಂಗಳೂರು, ಶ್ರೀ ಮಂಜುನಾಥೇಶ್ವರ ತುಳು ಪೀಠ, ಶ್ರೀ‌ಸಂಸ್ಥಾನ ಒಡಿಯೂರು ತುಳು ಅಧ್ಯಯನ ಕೇಂದ್ರ, ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು ಇವರ ಆಶ್ರಯದಲ್ಲಿ ಗುರುವಾರ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಳು ವೆಬಿನಾರ್ ಗಳ ಸಂಗ್ರಹ 'ಗೇನದ‌‌ ಗೆಜ್ಜೆ-ನೂದನೇ‌ ಪಜ್ಜೆ', ಶ್ರೀ ಮಂಜುನಾಥೇಶ್ವರ ತುಳು ಪೀಠದ‌ ಮೂವತ್ತನೇ ವರ್ಷದ ನೆನಪಿನ ಸಂಚಿ 'ತ್ರಿಂಶತಿ ತಿರುಳು' ಮತ್ತು ಶುಭಾಶಯ ಜೈನ್ ಬರೆದ ತುಳು ಯಕ್ಷಗಾನ ಪ್ರಸಂಗ 'ಅಪ್ಪೆ ಅಂಜನೆ' ಪುಸ್ತಕಗಳನ್ನು ಬಿಡುಗಡೆ‌ಗೊಳಿಸ ಲಾಯಿತು.


ಈ ಸಂದರ್ಭದಲ್ಲಿ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯ ಸದಸ್ಯರಿಂದ 'ಅಪ್ಪೆ ಅಂಜನೆ' ಯಕ್ಷಗಾನ ಪ್ರಸಂಗದ ಚೊಚ್ಚಲ ಪ್ರದರ್ಶನ ನಡೆಯಿತು. ಜೊತೆಗೇ ಜೈ ಗುರುದೇವ ಕಲಾ ಕೇಂದ್ರದ ಮಕ್ಕಳಿಂದ ಜಾನಪದ ಕುಣಿತ ಕಾರ್ಯಕ್ರಮ ಜನಮನ ಸೆಳೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮೀದೇವಿ ಆರ್ ಅಧ್ಯಕ್ಷತೆ ವಹಿಸಿದ್ದರು.


ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ ಹಾಗೂ ತುಳು ಎಂ.ಎ. ವಿಭಾಗದ ಸಂಯೋಜಕರಾದ ಡಾ. ಮಾಧವ ಎಂ.ಕೆ., ನೂಪುರ ಯಕ್ಷೋತ್ಥಾನ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಗೋವಿಂದ ವಂಡಾರು, ಬೆಂಕಿನಾಥೇಶ್ವರ ಯಕ್ಷಗಾನ ಮಂಡಲಿಯ ಸುರೇಂದ್ರ ಮಲ್ಲಿ, ಪ್ರವೀಣ್‌ಕುಮಾರ್ ಕೊಡಿಯಾಲ್ ಬೈಲ್, ಮೋಹನ್ ಪಡಿವಾಳ್, ರಾಜಶ್ರೀ ಎಸ್ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು. ತುಳು ಸ್ನಾತಕೋತ್ತರ ವಿಭಾಗದ ಉಪನ್ಯಾಸಕಿ ಜಯಲಕ್ಷ್ಮಿ ಆರ್‌‌‌ ಶೆಟ್ಟಿ  ಸ್ವಾಗತಿಸಿದರು, ಗೀತಾ ಜೈನ್ ವಂದನಾರ್ಪಣೆ ಸಲ್ಲಿಸಿದರು. ದ್ವಿತೀಯ ವರ್ಷದ ತುಳು ಎಂ.ಎ ವಿದ್ಯಾರ್ಥಿನಿ ಮಂಜುಳಾ ಶೆಟ್ಟಿ ಕಾರ್ಯಕ್ರಮ‌ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top