ಹಿರಿಯರು ಸಮಾಜದ ಹೊರೆಯಲ್ಲ: ಡಾ. ಮೋಹನ್ . ಎಸ್ ಸಿಂಘೆ

Upayuktha
0

ಅಸೈಗೋಳಿ: ಯುವ ಪೀಳಿಗೆ ತಮ್ಮ ಜವಾಬ್ದಾರಿಗಳನ್ನು ಮರೆಯುತ್ತಿದ್ದಾರೆ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ ಸಮಾಜದಲ್ಲಿ ಈಗಾಗಲೇ ಹಿರಿಯರ ಮೌಲ್ಯಗಳು ಕಳೆದು ಹೋಗಿವೆ. ಹಿರಿಯರು ಸಮಾಜದ ಹೊರೆಯಲ್ಲ, ಸಮಾಜದ ಸಂಪನ್ಮೂಲ ಎಂದು ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರು ಮತ್ತು ಸಹಾಯಕ ಪ್ರಾಧ್ಯಾಪಕ ಡಾ.| ಮೋಹನ್ ಎಸ್ ಸಿಂಘೆ ಹೇಳಿದರು. 


ಅವರು ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮಂಗಳಗಂಗೋತ್ರಿ ಕೊಣಾಜೆ ಹಾಗೂ ಜ್ಞಾನ ಬೆಳಕು ವಿದ್ಯಾರ್ಥಿ ಕೂಟ ಇದರ ಜಂಟಿ ಆಶ್ರಯದಲ್ಲಿ ಅಸೈಗೊಲಿಯ ಅಭಯ ಆಶ್ರಯದಲ್ಲಿ ಆಯೋಜಿಸಲಾದ ಹಿರಿಯರೊಂದಿಗೆ ಒಂದು ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು.   


ಭಾರತ ತುಂಬಾ ಅದೃಷ್ಟವಂತ ದೇಶ. ಇಲ್ಲಿ ಹಿರಿಯರನ್ನು ಗೌರವಿಸುವ ಪ್ರೀತಿಸುವ ಹಾಗೂ ಅವರ ಲಾಲನೆ ಪಾಲನೆ ಮಾಡುವ ಮನೋಭಾವ ಎಲ್ಲರಲ್ಲೂ ಇದೆ. ಆದರೆ ಈಗಿನ ಯುವ ಪೀಳಿಗೆ ತಮ್ಮ ಜವಾಬ್ದಾರಿಗಳನ್ನು ಮರೆತು ಹಿರಿಯರನ್ನು ವೃದ್ಧಾಶ್ರಮ ಅನಾಥಾಶ್ರಮಗಳಲ್ಲಿ ಸೇರಿಸುತ್ತಿದ್ದಾರೆ. ಯುವಕರು ಹಿರಿಯರ ಅನುಭವ ಹಾಗೂ ಮಾರ್ಗದರ್ಶನ ಇಲ್ಲದೆ ಹಾದಿ ತಪ್ಪುತ್ತ ಇದ್ದಾರೆ. ಹಿರಿಯರನ್ನು ಪೋಷಿಸುವ ಪಾಲನೆ ಮಾಡುವಂತಹ ಕಾರ್ಯವನ್ನು ಇದೀಗ ಅದೆಷ್ಟು ಸಂಸ್ಥೆಗಳು ಮಾಡುತ್ತಿವೆ. ವಿದ್ಯಾರ್ಥಿಗಳು ಅವರೊಂದಿಗೆ ಕೈಜೋಡಿಸಬೇಕು. ಹಿರಿಯರ ಗೌರವವನ್ನು ಮತ್ತೆ ಸ್ಥಾಪಿಸಬೇಕು. ಮತ್ತೆ ಸಮಾಜದಲ್ಲಿ ಮೌಲ್ಯವನ್ನು ಸ್ಥಾಪಿಸಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಹೇಳಿದರು.


ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.| ಜ್ಯೋತಿ ಪಿ. ಎಸ್. ಮಾತನಾಡಿ, ಹಿಂದಿನ ಕಾಲದಲ್ಲಿ ಹಿರಿಯರು ವಿದ್ಯೆಗೆ ತುಂಬಾ ಪ್ರಾಮುಖ್ಯತೆಯನ್ನು ಕೊಡುತ್ತಿದ್ದರು. ತಮ್ಮ ಮೊಮ್ಮಕ್ಕಳು ಮಕ್ಕಳು ಜೀವನ ರೂಪಿಸುವಲ್ಲಿ ಹಿರಿಯರು ತುಂಬಾ ಶ್ರಮವಹಿಸುತ್ತಿದ್ದರು. ಅಜ್ಜ ಅಜ್ಜಿ ಮಾಡುತ್ತಿದ್ದ ಹಾರೈಕೆ ತೋರುತ್ತಿದ್ದ ಪ್ರೀತಿ ಎಂದಿಗೂ ಅವಿಸ್ಮರಣೀಯ. ಆದರೆ ಈಗಿನ ವ್ಯವಸ್ಥೆಯ ಜೀವನದಲ್ಲಿ ಇವೆಲ್ಲವೂ ಮಾಸಿ ಹೊಗುತ್ತಿವೆ, ಹಿರಿಯರು ಯುವ ಪೀಳಿಗೆಯಿಂದ ದೂರ ಉಳಿಯುತ್ತಿದ್ದಾರೆ. ಅಭಯಾಶ್ರಮದಂತಹ ಸಂಸ್ಥೆಗಳು ಹಿರಿಯರ ಲಾಲನೆ ಪಾಲನೆ ಮಾಡುವಲ್ಲಿ ಅವರ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದರು. ಈ ವೇಳೆ ತಮ್ಮ ಬಾಲ್ಯದ ಜೀವನದ ಸವಿ ನೆನಪನ್ನು ಹಂಚಿಕೊಂಡರು. 


ಕಾರ್ಯಕ್ರಮದಲ್ಲಿ ಅಭಯ ಆಶ್ರಮ ಸಂಸ್ಥೆಯ ಅಧ್ಯಕ್ಷ ಜಗನ್ನಾಥ ಹೆಗ್ಡೆ ಹಾಗೂ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರಾದ ಡಾ | ಉಷಾರಾಣಿ, ರಾಜೇಶ್ವರಿ ಉಪಸ್ಥಿತರಿದ್ದರು . ವಿದ್ಯಾರ್ಥಿಗಳಿಂದ ಸಂಸ್ಕೃತಿ ಕಾರ್ಯ ಹಾಗೂ ಹಿರಿಯರಿಗೆ ಹಲವು ಚಟುವಟಿಕೆಗಳನ್ನು ಮಾಡಲಾಯಿತು. 


ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ರಚನಾ ಪ್ರಾರ್ಥಿಸಿದರು ,ಇಜಾಸ್ ಸ್ವಾಗತಿಸಿದರು, ಸುಕೆತ್ ವಂದಿಸಿದರು ಹಾಗೂ ಅರ್ಪಣ ಕಾರ್ಯಕ್ರಮವನ್ನು ನಿರೂಪಿಸಿದರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter    

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top