ತೆಂಕನಿಡಿಯೂರು ಕಾಲೇಜಿನ ಡಾ. ಎಚ್.ಕೆ. ವೆಂಕಟೇಶ ಅವರ 2 ಕೃತಿಗಳ ಲೋಕಾರ್ಪಣೆ

Upayuktha
0

ತೆಂಕನಿಡಿಯೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರು, ಉಡುಪಿ ಕಾಲೇಜಿನ ಡಾ.ಎಚ್.ಕೆ. ವೆಂಕಟೇಶ ಅವರ 2 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಅಮೃತ್ ಗಾರ್ಡನ್‍ನಲ್ಲಿ ನಡೆಸಲಾಯಿತು. 


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಡುಪಿಯ ನೂತನ ಶಾಸಕರಾದ ಯಶ್‍ಪಾಲ್ ಎ. ಸುವರ್ಣ, ಉಡುಪಿ ವಿಧಾನಸಭಾ ಕ್ಷೇತದ ನಿಕಟ ಪೂರ್ವ ಶಾಸಕರಾದ ಶ್ರೀ ಕೆ. ರಘುಪತಿ ಭಟ್, ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕರಾದ ರಾಜಶೇಖರ ಹೆಬ್ಬಾರ್‍ಅವರುಗಳು ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕರಾದ ಡಾ. ಎಚ್.ಕೆ. ವೆಂಕಟೇಶ ಅವರ ಕನ್ನಡ ಸಾಹಿತ್ಯವನ್ನು ಕುರಿತು ಹೊಸನೆಲೆಯಿಂದ ಆಲೋಚಿಸಿ ರಚಿಸಿರುವ ಕೃತಿ ‘ಕನ್ನಡ ಸಾಹಿತ್ಯ: ಪುನರಾವಲೋಕನ’ ಮತ್ತು ಆಧುನಿಕ ಕನ್ನಡ ಸಾಹಿತ್ಯದ ಮಹತ್ವದ ಕಥೆಗಾರರಲ್ಲೊಬ್ಬರಾದ ವಸುಧೇಂದ್ರರ ಕಥೆ, ಕಾದಂಬರಿಗಳನ್ನು ಅವಲೋಕಿಸಿ ಬಹುಶಃ ಮೊದಲ ಬಾರಿಗೆ ಅವರ ಕಥಾಸಾಹಿತ್ಯವನ್ನು ಕುರಿತು ಬರೆದ ಕೃತಿ ‘ವಸುಧೇಂದ್ರರ ಕಥಾಸಾಹಿತ್ಯ: ಸಮಕಾಲೀನ ಸಂವೇದನೆಗಳು’ ಎನ್ನುವ 2 ಕೃತಿಗಳನ್ನು ಬಿಡುಗಡೆಗೊಳಿಸಿದರು. 


ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ದುಗ್ಗಪ್ಪ ಕಜೆಕಾರ್, ಸಾಂಸ್ಕೃತಿಕ ಸಂಚಾಲಕರಾದ ಡಾ. ರಾಘವ ನಾಯ್ಕ, ಶ್ರೀ ಕೃಷ್ಣ, ಐಕ್ಯುಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ಕನ್ನಡ ಸಹಪ್ರಾಧ್ಯಾಪಕರಾದ ಡಾ. ವೆಂಕಟೇಶ್ ಹೆಚ್.ಕೆ, ವಿದ್ಯಾರ್ಥಿ ನಾಯಕರಾದ ಯಮುನಪ್ಪ ಮತ್ತು ಸ್ಪಂದನ ಮಯ್ಯ,ಶಿಕ್ಷಕ-ರಕ್ಷಕ ಸಂಘದ ಶ್ರೀಮತಿ  ಸುಜಾತ, ಶ್ರೀ ದಯಾನಂದ ಶೆಟ್ಟಿ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಡಾ. ರಘು ನಾಯ್ಕ ಕಾರ್ಯಕ್ಪಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top