ತೆಂಕನಿಡಿಯೂರು ಕಾಲೇಜ್ : ಹೂಡಿಕೆದಾರರ ಜಾಗೃತಿ ಒಂದು ದಿನದ ಕಾರ್ಯಗಾರ

Upayuktha
0

 


ತೆಂಕನಿಡಿಯೂರು: ಹೂಡಿಕೆಯ ಬಗೆಗಿನ ಜಾಗೃತಿ ಯಶಸ್ವಿ ಜೀವನದ ಪ್ರಮುಖ ಅಂಗ. ಸಕಾಲದಲ್ಲಿ ತೆಗೆದು ಕೊಳ್ಳುವ ಹೂಡಿಕೆಯ ನಿರ್ಧಾರಗಳು ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ. ಸಮಯವೇ ಹಣ ವಿದ್ದಂತೆ, ನಮ್ಮಲ್ಲಿನ ಉಳಿತಾಯ ಸರಿಯಾದ ಸಮಯದೊಂದಿಗೆ ನಷ್ಟ ಅನಿಶ್ಚಿತತೆಯನ್ನು ಎದುರಿಸುವ ಮನೋಭಾವದೊಂದಿಗೆ ವಿವಿಧ ಹೂಡಿಕೆಗಳ ಆಳವಾದ ಅರಿವಿನೊಂದಿಗೆ ತೊಡಗಿಸಿದರೆ ಒಬ್ಬ ವ್ಯಕ್ತಿಶಕ್ತಿಯಾಗಿ ಬದಲಾಗಲು ಸಾಧ್ಯ ಎಂದು ಪ್ರೊ. ಸುರೇಶ್ ರೈ. ಕೆ. ನುಡಿದರು.  


ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಡಿಯೂರಿನ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯಶಾಸ್ತ್ರ ಶಿಕ್ಷಕರ ಸಂಘ (ಮುಕ್ತ) ಸಹಯೋಗದಲ್ಲಿ ಏರ್ಪಡಿಸಿದ "ಹೂಡಿಕೆದಾರರ ಜಾಗೃತಿಯ ಒಂದು ದಿನದ ಕಾರ್ಯಕ್ರಮ" ಉದ್ಘಾಟಿಸಿ ಪ್ರೊ. ಸುರೇಶ್ ರೈ ಕೆ. ಮಾತನಾಡಿದರು.  


ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಶ್ರೀಮತಿ ಬಿಂದು ಟಿ. ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ವಿವರಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ ಗಣ್ಯರನ್ನು ಸ್ವಾಗತಿಸಿದರು. ಉದ್ಘಾಟನಾ ಸಮಾರಂಭದಲ್ಲಿ ನಿರ್ವಹಣಾಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ರಘು ನಾಯ್ಕ, ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ. ಪ್ಲೇಸ್ಮೆಂಟೆ ಸೆಲ್ ಸಂಚಾಲಕರಾದ ಉಮೇಶ್ ಪೈ,  ಸಹಪ್ರಾಧ್ಯಾಪಕರಾದ ಉದಯ ಶೆಟ್ಟಿ ಕೆ. ಉಪಸ್ಥಿತರಿದ್ದರು. 


ಮೂರು ಅಧಿವೇಶನಗಳಲ್ಲಿ ನಡೆದ ಕಾರ್ಯಗಾರದಲ್ಲಿ  ಸಂಪನ್ಮೂಲ ವ್ಯಕ್ತಿಗಳಾದ ಸಪ್ನ ಶೆಣೈ ಎಂ, ನವೀನ್ ರೇಗೋ, ಲಿಯೋ ಅಮಲ್ ಎ. ರವರು ಹೂಡಿಕೆಯ ವಿವಿಧ ಮಜಲುಗಳ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. 


ಅಂತಿಮ ಬಿ.ಕಾಂ. ವಿದ್ಯಾರ್ಥಿಗಳಾದ ವರ್ಷ, ಸಿಂಚನ ಮತ್ತು ವಾಣಿಶ್ರೀ ಕ್ರಮವಾಗಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಸುಷ್ಮಾ ಕಾರ್ಯಕ್ರಮ ನಿರೂಪಣೆಗೈದರು. ಉಪನ್ಯಾಸಕರಾದ ವೆಂಕಟೇಶ್ ಭಟ್,  ಶ್ರೀಮತಿ ಸ್ಮಿತಾ, ಶ್ರೀಮತಿ ಸೋನಿಯಾ, ಶ್ರೀಮತಿ ಧನ್ಯ, ಶ್ರೀಮತಿ ಮಮತಾ ಅಧಿವೇಶನಗಳನ್ನು ನಿರ್ವಹಿಸಿದರು.  ವಿದ್ಯಾರ್ಥಿಗಳಾದ ಕೌಶಿಕ್ ಮತ್ತು ನಿಸಾರ್ ತಾಂತ್ರಿಕ ವರ್ಗದಲ್ಲಿ ಸಹಕರಿಸಿದರು. ಕಾಲೇಜಿನ ಬಿಬಿಎ ಮತ್ತು ಬಿಕಾಂ ವಿಭಾಗದ 170 ವಿದ್ಯಾರ್ಥಿಗಳು ಸದರಿ ಕಾರ್ಯಕ್ರಮದ ಉಪಯೋಗ ಪಡೆದು ಕೊಂಡರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top