ಯುವಶಿಕ್ಷಣ ಅನ್ವೇಷಣೆ ಸ್ಪರ್ಧೆ: 30 ಅಗ್ರ ತಂಡಗಳ ಘೋಷಣೆ

Upayuktha
0

ಮಂಗಳೂರು: ದೇಶದ ಯುವಕರಲ್ಲಿ ಅನ್ವೇಷಣೀಯ ಚಿಂತನೆ ಮತ್ತು ಸಮಸ್ಯೆ ಪರಿಹಾರ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಯಾಮ್‍ಸಂಗ್ ಇಂಡಿಯಾ ಹಮ್ಮಿಕೊಂಡಿದ್ದ ತನ್ನ ಪ್ರಮುಖ ಯುವ ಶಿಕ್ಷಣ ಮತ್ತು ಅನ್ವೇಷಣೆ ಸ್ಪರ್ಧೆ ಸಾಲ್ವ್ ಫಾರ್ ಟುಮಾರೋದ 30 ಅಗ್ರ ತಂಡಗಳನ್ನು ಘೋಷಿಸಲಾಗಿದೆ.


ಈ ವಿಶಿಷ್ಟ ಸ್ಪರ್ಧೆಗೆ 500 ಕ್ಕೂ ಹೆಚ್ಚು ನಗರಗಳು, ಪಟ್ಟಣಗಳು ಮತ್ತು ಗ್ರಾಮಗಳಿಂದ 70,000ಕ್ಕೂ ಹೆಚ್ಚು ನೋಂದಣಿಗಳು ಬಂದಿದ್ದು, ಭಾರತ ಎದುರಿಸುತ್ತಿರುವ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುವ ಐಡಿಯಾಗಳನ್ನು ಸಲ್ಲಿಸಿವೆ. ಇದು ದೇಶದ ಅನ್ವೇಷಣೆ ಮತ್ತು ಉದ್ಯಮಶೀಲತೆಯ ಉತ್ಸಾಹಕ್ಕೆ ಸಾಕ್ಷಿಯಾಗಿದೆ ಎಂದು ಎಂದು ಸ್ಯಾಮ್‍ಸಂಗ್ ಸೌತ್‍ವೆಸ್ಟ್ ಏಷ್ಯಾದ ಕಾರ್ಪೊರೇಟ್ ಉಪಾಧ್ಯಕ್ಷ ಹ್ಯೂನ್ ಕಿಮ್ ಹೇಳಿದ್ದಾರೆ.

ನಾಲ್ಕು ಥೀಮ್‍ಗಳಾದ ಶಿಕ್ಷಣ ಮತ್ತು ಕಲಿಕೆ, ಆರೋಗ್ಯ ಮತ್ತು ಯೋಗಕ್ಷೇಮ, ಪರಿಸರ ಮತ್ತು ಸುಸ್ಥಿರತೆ ಹಾಗೂ ವೈವಿಧ್ಯತೆ ಮತ್ತು ಸಮಗ್ರತೆಯಲ್ಲಿ ಸಮಸ್ಯೆಗಳನ್ನು ಪರಿಹರಿಸಲು 16-22 ವಯೋಮಾನದ ಯುವಕರಿಂದ ಪರಿಕಲ್ಪನೆಗಳನ್ನು ಆಹ್ವಾನಿಸಲಾಗಿತ್ತು.


ಸಮುದ್ರದ ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವುದು, ಕುಡಿದು ವಾಹನೆ ಚಾಲನೆ ತಪ್ಪಿಸುವುದು, ಯುವಕರಿಗೆ ಕೌಶಲವನ್ನು ಕಲಿಸುವುದು, ಸೌರ ಪ್ಯಾನೆಲ್‍ಗಳ ದಕ್ಷತೆಯನ್ನು ಸುಧಾರಿಸುವುದು ಮತ್ತು ಕಳೆದುಹೋದ ಮಕ್ಕಳನ್ನು ಹುಡುಕುವುದು ಇತ್ಯಾದಿ ವಿಷಯಗಳನ್ನು ಇವು ಒಳಗೊಂಡಿವೆ ಎಂದು ಪ್ರಕಟಣೆ ಹೇಳಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top