ಮಂಗಳೂರಿನಲ್ಲಿ 3 ದಿನಗಳ ಪ್ಲಾಸ್ಟಿಕ್, ಇ-ತ್ಯಾಜ್ಯಗಳ ಸಂಗ್ರಹಣೆ ಅಭಿಯಾನ- ಜೂ.9ರಿಂದ 11ರ ವರೆಗೆ

Chandrashekhara Kulamarva
0

ಮಂಗಳಾ ರಿಸೋರ್ಸ್‌ ಮ್ಯಾನೇಜ್‌ಮೆಂಟ್‌- ಫಿಝಾ ನೆಕ್ಸಸ್ ಮಾಲ್ ಸಹಯೋಗದಲ್ಲಿ 



ಮಂಗಳೂರು: ಮಂಗಳಾ ರಿಸೋರ್ಸ್‌ ಮ್ಯಾನೇಜ್‌ಮೆಂಟ್‌ ಪ್ರೈ ಲಿ. ಸಂಸ್ಥೆ ನಗರದ ಫಿಝಾ ನೆಕ್ಸಸ್ ಮಾಲ್‌ ಸಹಯೋಗದಲ್ಲಿ ಪ್ಲಾಸ್ಟಿಕ್ ಮತ್ತು ಇ-ತ್ಯಾಜ್ಯಗಳ ಸಂಗ್ರಹಣಾ ಅಭಿಯಾನವನ್ನು ಜೂನ್ 9ರಿಂದ 11ರ ವರೆಗೆ ಆಯೋಜಿಸಿದೆ.


ಫಿಝಾ ನೆಕ್ಸಸ್ ಮಾಲ್‌ನಲ್ಲಿ ಈ ತ್ಯಾಜ್ಯಗಳ ಸಂಗ್ರಹಣೆಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ನಾಗರಿಕರು ಎಲ್ಲ ಬಗೆಯ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಇಲ್ಲಿಗೆ ತಂದು ಹಾಕಬಹುದು.


ಟಿವಿ ಮಾನಿಟರ್‌ಗಳು, ಮ್ಯೂಸಿಕ್ ಸಿಸ್ಟಂಗಳು, ಸ್ಪೀಕರ್‌ಗಳು, ಕೀ ಬೋರ್ಡ್‌ಗಳು, ಡೆಸ್ಕ್‌ಟಾಪ್‌, ಲ್ಯಾಪ್‌ಟಾಪ್‌, ನೋಟ್‌ಪ್ಯಾಡ್‌ಗಳು, ಸಿಪಿಯು, ಫ್ರಿಡ್ಜ್‌, ವಾಷಿಂಗ್ ಮೆಷೀನ್, ಗೂಸರ್, ಏರ್ ಕಮಡೀಶನರ್, ಕೂಲರ್‌ಗಳು, ಸೀಲಿಂಗ್ ಫ್ಯಾನ್‌ಗಳು, ಮೊಬೈಲ್‌ಗಳು, ಲ್ಯಾಂಡ್‌ ಫೋನ್‌ಗಳು, ವೈ-ಫೈ ರೂಟರ್‌ಗಳು, ಕ್ಯಾಮೆರಾ, ಚಾರ್ಜರ್‌ಗಳು, ಅಡಾಪ್ಟರ್‌ಗಳು, ಎಕ್ಸ್‌ಟೆಶನ್ಷನ್‌ ವಯರ್‌, ಕೇಬಲ್‌ಗಳು, ಮಿಕ್ಸಿ, ಗ್ರೈಂಡರ್‌, ಓವನ್‌ಗಳು, ಇಸ್ತ್ರಿ ಪೆಟ್ಟಿಗೆ, ಕೆಟಲ್‌, ಟೇಪ್ ರೆಕಾರ್ಡರ್‌, ರೇಡಿಯೋ, ಹೇರ್ ಡ್ರೈಯರ್‌ಗಳು, ಎಲೆಕ್ಟ್ರಿಕ್ ಆಟಿಕೆಗಳು, ಪ್ರಿಂಟರ್‌ಗಳು, ಪ್ರೊಜೆಕ್ಟರ್‌ಗಳು, ಸ್ಕ್ಯಾನರ್‌ಗಳು, ಸಿಡಿ, ಡಿವಿಡಿ, ಯುಪಿಎಸ್‌, ಬ್ಯಾಟರಿಗಳು ಮತ್ತು ಇತರ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌  ವಸ್ತುಗಳನ್ನು ಇಲ್ಲಿಗೆ ತಂದು ವಿಲೇವಾರಿ ಮಾಡಬಹುದು ಎಂದು ಮಂಗಳಾ ರಿಸೋರ್ಸ್‌ ಮ್ಯಾನೇಜ್ಮೆಂಟ್‌ ಸಂಸ್ಥೆಯ ಪ್ರಕಟಣೆ ತಿಳಿಸಿದೆ.


ನಾಗರಿಕರು ತಮ್ಮ ಮನೆಗಳಲ್ಲಿ ಈ ಬಗೆಯ ತ್ಯಾಜ್ಯ ವಸ್ತುಗಳನ್ನು ತಂದು ಕೊಟ್ಟು ಆಕರ್ಷಕ ಗಿಫ್ಟ್‌ ವೋಚರ್‌ಗಳನ್ನು ಪಡೆಯಬಹುದಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
To Top