ಕಾಳಜಿ: ಮಳೆಗಾಲದ ರೋಗಗಳು ಕಾಡುತ್ತಿವೆ ಎಚ್ಚರ

Upayuktha
0
ಸಾಂದರ್ಭಿಕ ಚಿತ್ರ

ಳೆಗಾಲ ಎಂದ ತಕ್ಷಣ ನೆನಪಾಗುವುದು ನೀರಿನ ಜೊತೆಗಿನ ಆಟ. ಅದರಲ್ಲೂ ಮಳೆಯಲ್ಲಿ ಒದ್ದೆಯಾಗುವುದು ಎಂದರೆ ಎಲ್ಲಾ ವಯಸ್ಸಿನವರಿಗೂ ಅದೇನೋ ಖುಷಿ. ಬಿಸಿಲಿನ ಬೇಗೆಯಿಂದ ಬಳಲಿದ ದೇಹಕ್ಕೆ ಮಳೆಹನಿಯ ಆರಂಭ ನವೋಲ್ಲಾಸ ನೀಡುತ್ತದೆ. ಮನಸ್ಸಿಗೆ ಮುದ ಕೊಡುತ್ತದೆ. ಹೀಗೆ ಮಳೆರಾಯನ ಆರಂಭಕ್ಕೆ ಕುಣಿಯುವವರೇ ಹೆಚ್ಚು. ಚಿಕ್ಕ ಮಕ್ಕಳಂತೂ ದೋಣಿಗಳನ್ನು ಮಾಡಿ ಸಂತೋಷಗೊಳ್ಳುತ್ತಾರೆ. ನಿಂತ ನೀರಿನಲ್ಲಿ ನಲಿದಾಡುವುದೆಂದರೆ ಎಲ್ಲಿಲ್ಲದ ಆನಂದ. 


ಆದರೆ ಆರೋಗ್ಯಕ್ಕೆ ಅದರಿಂದಾಗುವ ಅನಾಹುತಗಳ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲದಂತಾಗಿದೆ. ಈಗಿನ ವಾತಾವರಣ ಹೊಸ ಹೊಸ ಶೈಲಿಯ ರೋಗಗಳನ್ನು ಲೋಕಕ್ಕೆ ಪರಿಚಯಿಸುತ್ತಿವೆ. ಇದು ಮನುಷ್ಯನ ಆರೋಗ್ಯದ ಜೊತೆಗೂ ಕಣ್ಣಾಮುಚ್ಚಾಲೆ ಆಡುತ್ತಿವೆ. ನೆಗಡಿ, ಶೀತ, ಕೆಮ್ಮು, ಜ್ವರ ಮುಂತಾದ ರೋಗಗಳಿಂದು ಮನುಷ್ಯನ ಆತ್ಮೀಯ ಗೆಳೆಯರಾಗಿವೆ. ಮಳೆಗಾಲದ ಆಗಮನ ಡೆಂಗ್ಯೂ, ಮಲೇರಿಯಾ, ಮೊದಲಾದ ಸೊಳ್ಳೆಗಳನ್ನು ಕೈ ಬೀಸಿ ಕರೆಯುವಂತಾಗಿದೆ. ಸಣ್ಣ ಪುಟ್ಟ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರಲ್ಲಿ ಇಂತಹ ಸಂದರ್ಭದಲ್ಲಿ ರೋಗಗಳು ಹೆಚ್ಚಾಗಿ ಕಾಡುತ್ತದೆ. ಅವರನ್ನು ಆದಷ್ಟು ಜಾಗರೂಕತೆಯಿಂದ ನೋಡಿಕೊಳ್ಳಬೇಕು.


ಬೇಸಿಗೆಯ ಕಾಲದಲ್ಲಿ, ಒಮ್ಮೆ ಶಾಖದಿಂದ ಮುಕ್ತಿ ಸಿಕ್ಕಿದರೆ ಸಾಕು ಎಂದು ಕಾಯುವ ಜನರು ಮಳೆಗಾಲದಲ್ಲಿ ರೋಗಗಳಿಂದ ಬಿಡುಗಡೆಗೊಳ್ಳಲು ಪರದಾಡುತ್ತಿದ್ದಾರೆ. ಆಹಾರ, ನೀರು, ಗಾಳಿಗಳ ಮೂಲಕ ರೋಗಗಳಿಂದು ಮಾನವನ ದೇಹ ಸೇರುತ್ತಿವೆ. "ಆರೋಗ್ಯವೇ ಸಂಪತ್ತು" ಎಂಬ ನಾಣ್ಣುಡಿಯಂತೆ ಆರೋಗ್ಯವಂತ ವ್ಯಕ್ತಿ ಏನನ್ನು ಬೇಕಾದರೂ ಸಾಧಿಸಬಲ್ಲ. ಆದ್ದರಿಂದ ಮಳೆಗಾಲದಲ್ಲಿ ನಮ್ಮ ಆರೋಗ್ಯದ ಮೇಲೆ ಹೆಚ್ಚು ಗಮನ ಹರಿಸಬೇಕು. ಬಿಸಿ ಮಾಡಿ ಆರಿಸಿದ ನೀರನ್ನೇ ಕುಡಿಯಬೇಕು. ಮಳೆಗಾಲವನ್ನು ಪ್ರೀತಿಯಿಂದ ಸ್ವೀಕರಿಸಿ, ಆದರೆ ಅತಿಯಾಗದಿರಲಿ. ನಮ್ಮಿಂದ ವಾತಾವರಣವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ರೋಗಗಳಿಂದ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬಹುದು.



ಸಂಶೀನ ಸೂರ್ಯ,

ಪ್ರಥಮ ಪತ್ರಿಕೋದ್ಯಮ, ವಿವೇಕಾನಂದ ಕಾಲೇಜು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top