ಶ್ರೀನಿವಾಸ ವಿಶ್ವ ವಿದ್ಯಾಲಯ: ಕಡಲ ತೀರ ಸ್ವಚ್ಚತಾ ಅಭಿಯಾನ

Chandrashekhara Kulamarva
0

ಮಂಗಳೂರು: ಶ್ರೀನಿವಾಸ ವಿಶ್ವ ವಿದ್ಯಾಲಯ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನೋಲಜಿ ಮುಕ್ಕವು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ಇವರ ಸಹಯೋಗದೊಂದಿಗೆ ಪರಿಸರ ದಿನಾಚರಣೆಯ ಅಂಗವಾಗಿ ಜೂನ್ 05 ರಂದು ಸಸಿಹಿತ್ಲು ಕಡಲ ತೀರದ ಸ್ವಚ್ಚತಾ ಕಾರ್ಯಕ್ರಮ ಕೈ ಗೊಂಡಿದ್ದರು. ಇಂಜಿನಿಯರಿಂಗ್ ಮೊದಲ ವರ್ಷದಲ್ಲಿ ಓದುತ್ತಿರುವ ಸುಮಾರು 250 ವಿದ್ಯಾರ್ಥಿಗಳು ಜೊತೆಗೂಡಿ ಸಸಿಹಿತ್ಲು ಕಡಲ ತೀರದ ಪ್ಲಾಸ್ಟಿಕ್, ಕಸ ಕಡ್ಡಿಗಳನ್ನು ಸಂಪೂರ್ಣವಾಗಿ ತೆಗೆದು ಹಾಕಿ ಸ್ವಚ್ಚ ಮಾಡಿದರು. 


ಸಸಿಹಿತ್ಲು ಗ್ರಾಮದ ಜನರಿಗೂ ಪರಿಸರ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಿದರು. ಜೂನ್ 05 ರಂದು ಸಾಯಂಕಲ ಸುಮಾರು ಎರಡು ಗಂಟೆಗಳ ಕಾಲ ಶ್ರಮದಾನ ಮಾಡಿದರು. 


ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ವಿಜಯ ಹೆಗಡೆ   ಪರಿಸರ ಅಧಿಕಾರಿ ಡಾ. ರವಿ,  ಸಹ ಪರಿಸರ ಅಧಿಕಾರಿ ಡಾ. ಮಂಜುರವರು  ಮಕ್ಕಳಿಗೆ ಹಾಗೂ ಸ್ಥಳೀಯರಿಗೆ ಪರಿಸರ ಜಾಗೃತಿ ಮೂಡಿಸಿದರು. ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕೆಲಸವನ್ನು ಸಸಿಹಿತ್ಲು ಗ್ರಾಮಸ್ಥರು ಶ್ಲಾಘಿಸಿದರು.  


ಈ ಕಾರ್ಯಕ್ರಮದಲ್ಲಿ ಮುಕ್ಕ ಶ್ರೀನಿವಾಸ ಇಂಜಿನಿಯರಿಂಗ್   ಕಾಲೇಜಿನ ಇಲೆಕ್ಟ್ರೋನಿಕ್ಸ್ ಆಂಡ್ ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥರಾದ ಪ್ರೊ.  ಡಾ. ನವೀನ್ ಕುಮಾರ್ ಜೆ.ಆರ್,  ಪ್ರೊ. ಕೃಷ್ಣ ಕೌಶಿಕ್,  ವಾರ್ಡನ್ ಉಮೇಶ್, ಮಾಲತಿ,  ಸುಜಾತ ಇವರುಗಳು ಭಾಗವಹಿಸಿದ್ದರು. ಪರಿಸರ ನಿಯಂತ್ರಣ ಮಂಡಳಿಯ ವಿವಿಧ ವಿಭಾಗದ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಕೈ ಜೋಡಿಸಿದ್ದರು.  ಡಾ. ಪ್ರವೀಣ್ ಬಿ ಎಂ.  ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
To Top