RLSS ನಡೆಸಿದ ಸ್ಪರ್ಧೆಯಲ್ಲಿ ಅಂಬಿಕಾದ ವಿದ್ಯಾರ್ಥಿಗಳ ಸಾಧನೆ

Upayuktha
0

ನೆಲ್ಲಿಕಟ್ಟೆ: ರಾಷ್ಟ್ರೀಯ ಜೀವರಕ್ಷಣಾ ಸಮಿತಿ ಇವರು ಬೆಂಗಳೂರಿನ ರೇ ಸೆಂಟರ್‍‌ನಲ್ಲಿ ನಡೆಸಿದ ರಾಷ್ಟ್ರಮಟ್ಟದ ಜೀವರಕ್ಷಣಾ ವಾಟರ್ ಚಾಂಪಿಯನ್‍ಶಿಪ್‍ನಲ್ಲಿ ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ವಿದ್ಯಾರ್ಥಿಗಳು ಸ್ಪರ್ಧಿಸಿ ಹಲವು ಪದಕಗಳನ್ನು ಗೆದ್ದಿರುತ್ತಾರೆ.

ದರ್ಬೆಯ ನಳಿನಾಕ್ಷ-ಗಾಯತ್ರಿ ದಂಪತಿ ಪುತ್ರ ಅನಿಕೇತ್, ಪ್ರಥಮ ಪಿಯುಸಿ ವಿದ್ಯಾರ್ಥಿ ಇವರು ರಿಲೇ, ಲೈನ್ ತ್ರೋ, ರೆಸ್ಕ್ಯೂ ಮಿಡ್‍ಲೇ, ಸೂಪರ್ ಲೈಫ್ ಸೇವರ್‍ನಲ್ಲಿ ಸ್ಪರ್ಧಿಸಿ 3 ಚಿನ್ನ, 2 ಬೆಳ್ಳಿ, 1 ಕಂಚಿನ ಪದಕ ಗೆದ್ದಿರುತ್ತಾರೆ. ಮರೀಲಿನ ಕೇಶವ ಕುಮಾರ್-ಮೀನಾಕ್ಷಿ ದಂಪತಿಯ ಪುತ್ರ, ಪ್ರಥಮ ಪಿಯುಸಿ ವಿದ್ಯಾರ್ಥಿ ಧನ್ವಿತ್ ಇವರು ಮೂರು ರಿಲೇಗಳಲ್ಲಿ 2 ಚಿನ್ನ, 1 ಬೆಳ್ಳಿ, 100 ಮೀಟರ್‍‌ನ manikin carryಯಲ್ಲಿ 1 ಬೆಳ್ಳಿ, ಲೈನ್ ತ್ರೋದಲ್ಲಿ 1 ಬೆಳ್ಳಿ, 200 obstacle, 100 obstacleನಲ್ಲಿ 2 ಚಿನ್ನದ ಪದಕಗಳನ್ನು ಗೆದ್ದು ಸಾಧನೆ ಗೈದಿರುತ್ತಾರೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top