ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಹರಿದಾಸರ ಮಿಲನ, ದಾಸೋಪಾಸನ

Upayuktha
0

ಬೆಂಗಳೂರು: ಫೇಸ್ಬುಕ್- ಮುಖಪುಟ ಅಂತರ್ಜಾಲ ತಾಣದಲ್ಲಿ ಹೆಸರು ಮಾಡಿರುವ ಹರಿದಾಸರ ಮಿಲನ ಮತ್ತು ದಾಸೋಪಾಸನ, ಹಾಗೂ ಚಿಪ್ಪಗಿರಿ ವಿಜಯದಾಸರ ಸೇವಾ ಬಳಗ ವಾರ್ಷಿಕೋತ್ಸವದ ಕಾರ್ಯಕ್ರಮ ಬೆಂಗಳೂರಿನ ಕತ್ತರಿಗುಪ್ಪೆ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ  ಬಹಳ ವಿಜೃಂಭಣೆಯಿಂದ ಇತ್ತೀಚೆಗೆ ನಡೆಯಿತು. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರ ಅಧ್ಯಕ್ಷತೆಯಲ್ಲಿ ಹಾಗೂ ಮಾಧ್ವ ಮಹಾಮಂಡಲ ಪರಿಷತ್ತಿನ ಕಾರ್ಯದರ್ಶಿ ಶ್ರೀಪಾದ ಸಿಂಗನಮಲ್ಲಿ ಮುಂದಾಳತ್ವದಲ್ಲಿ ಸಂಸ್ಥಾಪಕರಾದ  ಡಾ. ರಾಮಚಂದ್ರ ಕುಲಕರ್ಣಿ ಹಾಗೂ ಹಿರಿಯರಾದ  ಸುರೇಶ ಕಲ್ಲೂರು ಅಡ್ಮಿನ್ ಮತ್ತು ಮಾಡ್ರೆಟರ್, ಸಮಸ್ತ ಹರಿದಾಸ ಬಂಧುಗಳ ಸಮ್ಮುಖದಲ್ಲಿ  ನಡೆಯಿತು.


ಶ್ರೀ ಬ್ರಹ್ಮಣ್ಯಾಚಾರ್ ಪ್ರವಚನ, ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರ ನುಡಿ ಸಂದೇಶ, ಸಾಯಂಕಾಲ ವಿದ್ವಾ೦ಸರಾದ ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರ ಮುಂಡಿಗೆ ಚಿಂತನೆ, ಹಾಗೂ ವಿವಿಧ ಗಾಯಕ ಮತ್ತು ಗಾಯಕಿಯರಿಂದ  ಗಾಯನ -ನೃತ್ಯ ಸೇವೆ, ಹಾಗೂ ಖ್ಯಾತ ಚಲನ ಚಿತ್ರ ನಟ ಪ್ರಣಯರಾಜ ಶ್ರೀನಾಥ ಅವರು ಉಪಸ್ಥಿತಿಯಲ್ಲಿ ನಿತ್ಯ ಹರಿದಾಸ ಗಾನ ಸೇವೆಯಲ್ಲಿ ಭಾಗಿಯಾದ 200 ಕ್ಕೂ ಅಧಿಕ ಸದಸ್ಯರಿಗೆ ಹಾಗೂ ವಾರಕ್ಕೊಮ್ಮೆ ನೇರ ಪ್ರಸಾರ ಗಾಯನ ಸೇವೆ ಮಾಡಿದವರಿಗೆ, ವಿವಿಧ ಭಜನಾ ಮಂಡಳಿಗಳಿಗೆ,  ಒಟ್ಟಾರೆ ೨೫೦ ಜನರಿಗೆ "ರಾಷ್ಟ್ರೀಯ ಹರಿದಾಸ ಗಾನ ವಿಭೂಷಣ", "ಅಂಜನಾದ್ರಿ ಶೂರಸೇನ" "ವಿಜಯ ದುಂದುಭಿ"  ಪ್ರಶಸ್ತಿಗಳನ್ನು  ಪ್ರದಾನ ಮಾಡಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top