ಎಲ್20: ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ- ಬಿಎಂಎಸ್ ವತಿಯಿಂದ ವಿಶೇಷ ಉಪನ್ಯಾಸ

Upayuktha
0


ಮಂಗಳೂರು: G20 ಪ್ರಯುಕ್ತ ಭಾರತೀಯ ಮಜ್ಡೂರ್ ಸಂಘದ ವತಿಯಿಂದ L20 ಕಾರ್ಯಸೂಚಿಯಂತೆ ದಕ್ಷಿಣ ಕನ್ನಡ ಬಿಎಂಎಸ್‌ ವಿಶೇಷ ಕಾರ್ಯಾಗಾರವನ್ನು ಇಂದು ಆಯೋಜಿಸಿತ್ತು. 

ಮಂಗಳೂರಿನ ಕಾವೂರಿನಲ್ಲಿರುವ ಕುದುರೆಮುಖ ಉಪನಗರದ ನೆಹರು ಭವನದಲ್ಲಿ ಕುದುರೆಮುಖ ಮಜ್ಡೂರ್ ಸಂಘವು ಸಂಯೋಜಿಸಿದ ಕಾರ್ಯಾಗಾರದಲ್ಲಿ ಭಾರತೀಯ ಮಜ್ಡೂರ್ ಸಂಘದ ಕೇಂದ್ರೀಯ ಉಕ್ಕು ವಿಭಾಗದ ಪ್ರಭಾರಿ ದೇವೇಂದ್ರ ಕುಮಾರ್ ಪಾಂಡೆ ಅವರು 'ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ' ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು  ನೀಡಿದರು.


ದ.ಕ ಜಿಲ್ಲಾ ಬಿಎಂಎಸ್ ಅಧ್ಯಕ್ಷ ಅನಿಲ್ ಕುಮಾರ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಕಾರ್ಮಿಕ ನಾಯಕರಾದ ವಿಶ್ವನಾಥ ಶೆಟ್ಟಿ, ಕೆಐಒಸಿಎಲ್ ಮಹಾಪ್ರಬಂಧಕ ಆರ್‌.ಡಿ. ಪ್ರಭು, ರಾಜ್ಯ ಭಾರತೀಯ ಮಜ್ಡೂರ್ ಸಂಘದ ಉಪಾಧ್ಯಕ್ಷರು ಭಗವಾನ್ ದಾಸ್, ಎನ್‌ಒಬಿಒದ ಜಂಟಿ ಪ್ರಧಾನ ಕಾರ್ಯದರ್ಶಿ ಸತೀಶ್ ಶೆಟ್ಟಿ, ರಾಜ್ಯ ಬಿಎಂಎಸ್ ಕಾರ್ಯದರ್ಶಿ, ಜಯರಾಜ್ ಸಾಲಿಯಾನ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ, ಗೋಪಾಲಕೃಷ್ಣ,  ಕಾರ್ಯಕ್ರಮದ ಪ್ರಯೋಜಕತ್ವದ ಜವಾಬ್ದಾರಿ ವಹಿಸಿದ ಕುದುರೆಮುಖ ಮಜ್ಡೂರ್ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕರ್ಕೇರ ಭಾಗವಹಿಸಿದ್ದರು.


ಭಗವಾನ್ ದಾಸ್ ಸ್ವಾಗತಿಸಿದರು, ಸತೀಶ್ ಶೆಟ್ಟಿ L 20 ಬಗ್ಗೆ ಮಾಹಿತಿ ನೀಡಿದರು, ದ.ಕ ಜಿಲ್ಲಾ ಭಾರತೀಯ ಮಜ್ಡೂರ್ ಸಂಘದ ಖಜಾಂಚಿ ಉದಯಕುಮಾರ್ ಬಿ.ಸಿ ವಂದನಾರ್ಪಣೆ ಸಲ್ಲಿಸಿದರು. ಸಭೆಯ ಮೊದಲು ನರಸಿಂಹ ಕುಲಕರ್ಣಿ ನೇತೃತ್ವದಲ್ಲಿ ಗೀತಾ ಭಾರತಿ ತಂಡದವರು ದೇಶ ಭಕ್ತಿ ಗಾಯನ  ನಡೆಸಿದರು. ಸುಕುಮಾರ್ ಬಲ್ಲಾಳ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top