ನಾಳೆ ಶ್ರೀ ಸುಬುಧೇಂದ್ರತೀರ್ಥ ಶ್ರೀಗಳಿಂದ ಶಿಷ್ಯ- ಭಕ್ತರಿಗೆ "ತಪ್ತ ಮುದ್ರಾ ಧಾರಣ"

Upayuktha
0

ಬೆಂಗಳೂರು: ಜಯನಗರದ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ "ಪ್ರಥಮ ಏಕಾದಶಿ" ಪ್ರಯುಕ್ತ ಜೂನ್ 29, ಗುರುವಾರದಂದು ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಡಾ. ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಪ್ರಾತಃಕಾಲದಲ್ಲಿ ಶ್ರೀಮನ್ ಮೂಲ ರಾಮಚಂದ್ರ ದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿ ಹಾಗೂ ಸುದರ್ಶನ ಹೋಮದ ನಂತರ ಬೆಳಗ್ಗೆ 7.30 ರಿಂದ ರಾತ್ರಿ 9:00 ವರೆಗೆ ಶ್ರೀ ಮಠದ ಶಿಷ್ಯರಿಗೆ-ಭಕ್ತರಿಗೆ "ತಪ್ತ-ಮುದ್ರಾಧಾರಣೆ" ಯನ್ನು ನೆರವೇರಿಸಲಿದ್ದಾರೆ.


ಈ ಸಂದರ್ಭದಲ್ಲಿ ನಾಡಿನ ಶ್ರೇಷ್ಠ ವಿದ್ವಾಂಸರಿಂದ ನಿರಂತರ "ಜ್ಞಾನ ಯಜ್ಞ ಪ್ರವಚನ "ಕಾರ್ಯಕ್ರಮವೂ ನೆರವೇರಲಿದೆ. ಶ್ರೀ ಮಠಕ್ಕೆ "ತಪ್ತ-ಮುದ್ರಾಧಾರಣೆ"ಗಾಗಿ  ಆಗಮಿಸುವ ಶಿಷ್ಯರಿಗೆ-ಭಕ್ತರಿಗೆ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗಿದೆ ವಯೋವೃದ್ದರಿಗೆ, ಮತ್ತು ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದಿಂದ್ರಾಚಾರ್ಯರು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ನಂದಕಿಶೋರ್ ಆಚಾರ್ಯರನ್ನು ಸಂಪರ್ಕಿಸಬಹುದು. 08022443962- 8660349906.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top