ಮಂಗಳೂರು: ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹೈಪರ್- ವ್ಯಾಲ್ಯೂ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಆಗಿರುವ ಶಾಪ್ಸಿ ದೇಶಾದ್ಯಂತ ಲಕ್ಷಾಂತರ ಗ್ರಾಹಕರಿಗೆ ಮೌಲ್ಯವನ್ನು ತಂದುಕೊಡುತ್ತಿದೆ. ಕಳೆದ ವರ್ಷ ಇದರ ಈ ಅಪ್ಲಿಕೇಶನ್ ಅನ್ನು 175 ಮಿಲಿಯನ್ ಗೂ ಅಧಿಕ ಮಂದಿ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಈ ಮೂಲಕ ಗ್ರಾಹಕರು ಮತ್ತು ಮಾರಾಟಗಾರರ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಿಕೊಂಡಿದೆ.
ಕಳೆದ ತ್ರೈಮಾಸಿಕದಲ್ಲೇ ಶಾಪ್ಸಿ 16 ದಶಲಕ್ಷ ಗ್ರಾಹಕರಿಗೆ ಸೇವೆ ಒದಗಿಸಿದೆ. ಪ್ರಸ್ತುತ ಶಾಪ್ಸಿ ದೇಶದ 2 ಮತ್ತು 3 ನೇ ಶ್ರೇಣಿಯ ಪ್ರದೇಶಗಳಲ್ಲಿ ಸುಮಾರು ಶೇ.70 ರಷ್ಟು ಗ್ರಾಹಕರನ್ನು ಹೊಂದಿದ್ದು, ಒಟ್ಟಾರೆ ಫ್ಲಿಪ್ ಕಾರ್ಟ್ ಗ್ರೂಪ್ ಗೆ ಶೇ.40 ರಷ್ಟು ಮೊದಲ ಬಾರಿಯ ಗ್ರಾಹಕರನ್ನು ನೀಡಿದೆ ಎಂದು ಫ್ಲಿಪ್ ಕಾರ್ಟ್ ಶಾಪ್ಸಿ ಮುಖ್ಯಸ್ಥ ಕಪಿಲ್ ಥಿರಾನಿ ಹೇಳಿದ್ದಾರೆ.
ಶಾಪ್ಸಿಯಲ್ಲಿ ದೊರೆಯುವ ಉತ್ಪನ್ನಗಳ ಪೈಕಿ ಶೇ.60 ರಷ್ಟು ಉತ್ಪನ್ನಗಳ ಬೆಲೆ 200 ರೂಪಾಯಿಗಿಂತಲೂ ಕಡಿಮೆ ಇದೆ. ಪ್ಲಾಟ್ ಫಾರ್ಮ್ ನ ಹೈಪರ್ -ವ್ಯಾಲ್ಯೂ ಸ್ಥಿತಿಯು ಗ್ರಾಹಕರಿಗೆ ಆಫ್ ಲೈನ್ ಶಾಪಿಂಗ್ ಅನುಭವವದಿಂದ ವರ್ಚುವಲ್ ವರೆಗೆ ತಮ್ಮ ಅಗತ್ಯತೆಗಳ ಪರಿವರ್ತನೆಗೆ ನೆರವಾಗುತ್ತದೆ ಎಂದು ಪ್ರಕಟಣೆ ಹೇಳಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ