ಉಜಿರೆ: ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯ ಮಹಿಳಾ ಅಭಿವೃದ್ಧಿ ಕೋಶ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕವು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಕಾಲೇಜಿನ ಸಹಯೋಗದಲ್ಲಿ ದಿನಾಂಕ 16 ರಿಂದ 21 ಮಾರ್ಚ್ ವರೆಗೆ ಯೋಗ ಸಪ್ತಾಹವನ್ನು ಆಚರಿಸಲಾಯಿತು. ಕಾಲೇಜಿನ ಎಲ್ಲ ಮಹಿಳಾ ಸಿಬ್ಬಂದಿ ಇದರಲ್ಲಿ ಭಾಗವಹಿಸಿ ಯೋಗ ಹಾಗೂ ಪ್ರಾಣಾಯಾಮದ ಮಹತ್ವವನ್ನು ಅರಿತುಕೊಂಡರು.
ಸಪ್ತಾಹದ ಮೊದಲ ದಿನವಾದ ಜೂ.16ರಂದು ಡಾಕ್ಟರ್ ಶಾಲ್ಮಾಲಿ ಸುನಿಲ್ ಯೋಗ ಶಿಬಿರವನ್ನು ಉದ್ಘಾಟಿಸಿ ಮಹಿಳೆಯರ ಆರೋಗ್ಯಕ್ಕೆ ಯೋಗದ ಅವಶ್ಯಕತೆಯನ್ನು ತಿಳಿಸಿದರು. ಯೋಗ ಸಪ್ತಾಹದ ಕೊನೆಯ ದಿನವಾದ ಇಂದು ಸಮಾರೋಪ ಸಮಾರಂಭವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಬಿ.ಎ.ಕುಮಾರ್ ಹೆಗ್ಡೆ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. "ಆರೋಗ್ಯಕರ ಜೀವನವನ್ನು ನಡೆಸುವುದರಲ್ಲಿ ಯೋಗಾಭ್ಯಾಸವು ಮಹತ್ತರ ಪಾತ್ರವನ್ನು ವಹಿಸುತ್ತದೆ. ಪ್ರತಿದಿನದ ಯೋಗಾಭ್ಯಾಸವು ಆಯಸ್ಸಿನ ವೃದ್ಧಿಗೆ ಕಾರಣವಾಗುತ್ತದೆ.ಈ ಸಂದರ್ಭದಲ್ಲಿ ನಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಪ್ರತಿದಿನ ಯೋಗ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಡಾ.ಅದಿತಿ ಹಾಗೂ ಡಾ.ಚೇತನ ಭಟ್, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಪ್ರೊ.ದೀಪಾ ಆರ್.ಪಿ ಹಾಗೂ ಮಹಿಳಾ ಅಭಿವೃದ್ಧಿ ಕೋಶದ ಸಂಯೋಜಕರಾದ ಪ್ರೊ.ಅಕ್ಷತಾ ಜೈನ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ