ಮಂಗಳೂರು: 'ದೇಹದಲ್ಲಿ ತನ್ನ ಕಾರ್ಯಗಳ ಮೇಲೆ ಹಿಡಿತವಿದ್ದು, ಎಲ್ಲ ರೀತಿಯಲ್ಲೂ ಸರಿಯಾದ ಮಾದರಿಯನ್ನು ಹೊಂದಿದ್ದಲ್ಲಿ ಯಾವುದೇ ರೋಗವು ಬಾಧಿಸುವುದಿಲ್ಲ. ದೈಹಿಕವಾಗಿ ಸದೃಢವಾಗಿರಲು ಯೋಗವೊಂದೇ ದಾರಿ' ಎಂದು ಯೋಗ ಕುಟೀರದ ಸಂಸ್ಥಾಪಕ ಹಾಗೂ ಯೋಗ ಗುರು ರಾಧಾಕೃಷ್ಣ ಶೆಟ್ಟಿ ಹೇಳಿದರು.
ಅವರು ಬುಧವಾರ (ಜೂ.21) ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಆಯೋಜಿಸಿದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯೋಗ ಗುರು ಮುಸ್ತಾಫ ಯೋಗದಿನಾಚರಣೆಯ ಕುರಿತಂತೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪಿ.ಎಸ್. ಐತಾಳ್, ಶ್ರೀನಿವಾಸ ವಿಶ್ವವಿದ್ಯಾಲಯದ ಅಭಿವೃದ್ಧಿ ರಿಜಿಸ್ಟ್ರಾರ್ ಡಾ.ಅಜಯ್ ಕುಮಾರ್, ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಡೀನ್ ಡಾ. ರಾಜಶೇಖರ್ ಎಸ್. ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಪಾಲ್ಗೊಂಡರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ