ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯಲ್ಲಿ ‘ವಿವೇಕ ಸಂಜೀವಿನಿ’ ತರಬೇತಿ ಶಿಬಿರ ಉದ್ಘಾಟನೆ
ಅವರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಔಷಧೀಯ ಸಸ್ಯಗಳ ಸಂರಕ್ಷಣೆ, ಸಂವರ್ಧನೆ, ಬಳಕೆ ಹಾಗೂ ಜನಜಾಗೃತಿಯ ಆಂದೋಲನ 'ವಿವೇಕ ಸಂಜೀವಿನಿ' ತರಬೇತುದಾರರ ತರಬೇತಿ ಶಿಬಿರದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನಮ್ಮನ್ನು ನಾವು ಕಾಪಾಡಿಕೊಳ್ಳುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಪರಿಸರರಕ್ಷಣೆ ಮಾನವನಿಗೆ ಅನಿವಾರ್ಯವಾಗಿದ್ದು, ಮನುಷ್ಯ ಪ್ರಕೃತಿಯ ಪ್ರತಿಯೊಂದು ಸೃಷ್ಠಿಯ ಮೇಲೂ ಅವಲಂಬಿತನಾಗಿದ್ದಾನೆ. ರೈತರು ಆರ್ಥಿಕ ಲಾಭದ ಹೊರತು ಯಾವ ಬೆಳೆಯನ್ನೂ ಬೆಳೆಯುವುದಿಲ್ಲ. ಆದರೆ ಪರಿಸರರಕ್ಷಣೆಗೆ ಪ್ರತಿಯೊಬ್ಬರೂ ಸಣ್ಣ ಮಟ್ಟದಲ್ಲಾದರೂ ಕೈ ಜೋಡಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್‍ಕಲ್ಲಡ್ಕ ಮಾತನಾಡಿ, ನಮ್ಮ ಸುತ್ತ ಮುತ್ತಲಿನ ಪರಿಸರ ಸದಾ ನಮ್ಮ ಮನ ತಣಿಸುತ್ತದೆ.ಇಲ್ಲಿನ ಪ್ರತಿಯೊಂದು ಅಂಶವೂ ಆರೋಗ್ಯಕರ ಜೀವನಕ್ಕೆ ಸಹಕಾರಿ. ಪಂಚಭೂತಗಳನ್ನು ಒಳಗೊಂಡ ಈ ಸೃಷ್ಠಿಯ ಮೇಲೆ ಮನುಷ್ಯ ಪ್ರತೀ ಹಂತದಲ್ಲೂಅವಲಂಬಿತ.ಆದರೆ ಈ ಅವಲಂಭನೆಅತಿಯಾಗಿ ಪ್ರಕೃತಿಯ ವಿನಾಶದತ್ತತೊಡಗಿದ್ದಾನೆ. ನೈಸರ್ಗಕವಾಗಿ ಸಿಕ್ಕ ಸಂಪನ್ಮೂಲಗಳಿಗೆ ಅತಿಯಾದ ಅವೈಜ್ಞಾನಿಕ ಉಪಯೋಗದಿಂದಾಗುವ ಮುಂದಿನ ಅಪಾಯಗಳ ಬಗ್ಗೆ ಭಯ ಮೂಡಿಸುತ್ತದೆ. ಈ ನಿಟ್ಟಿನಲ್ಲಿ ʻವಿವೇಕಸಂಜೀವಿನಿ' ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಪರಿಸರದ ರಕ್ಷಣೆಗೆ ಬಹುದೊಡ್ಡ ಕೊಡುಗೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಉರಗತಜ್ಞ ಡಾ.ರವೀಂದ್ರನಾಥ ಐತಾಳ್, ಖ್ಯಾತಔಷಧೀಯ ಸಸ್ಯಗಳ ಸಂರಕ್ಷಕ ದಿನೇಶ್ ನಾಯಕ್‍ಅವರಿಗೆ ವಿವೇಕ ಸಂಜೀವಿನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ಔಷಧೀಯ ಸಸ್ಯಗಳ ವಿವರಗಳನ್ನು ಒಳಗೊಂಡ 'ವಿವೇಕ ಸಂಜೀವಿನಿ’ ಪುಸ್ತಕ ಬಿಡುಗಡೆ ಹಾಗೂ ರೇಡಿಯೋ ಪಾಂಚಜನ್ಯದ ಔಷಧೀಯ ಸಸ್ಯಗಳ ಬಗೆಗಿನ ಮಾಹಿತಿಯ ಸರಣಿ ಬಾನುಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಕಾರ್ಯಚರಿಸುತ್ತಿರುವ ಸುಮಾರು 80ಕ್ಕೂ ಅಧಿಕ ವಿದ್ಯಾಸಂಸ್ಥೆಗಳ ಆಯ್ದ ಉಪನ್ಯಾಸಕರು ಶಿಬಿರದಲ್ಲಿ ತರಬೇತಿ ಪಡೆದುಕೊಂಡರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ ಕೃಷ್ಣ ಭಟ್ ಪ್ರಾಸ್ತಾವಿಕ ಮಾತಗಳನ್ನಾಡಿದರು. ವಿದ್ಯಾರ್ಥಿನಿ ಸಿಂಚನಲಕ್ಷ್ಮಿ ಪ್ರಾರ್ಥಿಸಿ, ಶ್ವೇತಾ ವೈಯುಕ್ತಿಕಗೀತೆ ಹಾಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದಜೊತೆ ಕಾರ್ಯದರ್ಶಿ ರೂಪಲೇಖಾ ಸ್ವಾಗತಿಸಿ, ಡಾ.ಸುಧಾರಾವ್ ವಂದಿಸಿದರು.ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರೋನಿಕ್ ವಿಭಾಗದ ಲ್ಯಾಬ್ ಸಹಾಯಕ ಹರಿಪ್ರಸಾದ್‍ಕಾರ್ಯಕ್ರಮ ನಿರ್ವಹಿಸಿದರು.
ಮೂರು ಅವಧಿಗಳು:
ಮೊದಲ ಅವಧಿಯಲ್ಲಿ ಔಷಧೀಯ ಸಸ್ಯತಜ್ಞ ದಿನೇಶ್ ನಾಯಕ್ 'ಪಶ್ಚಿಮ ಘಟ್ಟದಜೀವ ವೈವಿಧ್ಯತೆ, ಅಳಿವಿನಂಚಿನಲ್ಲಿರುವ ಔಷಧೀಯ ಸಸ್ಯಗಳ ಬಗ್ಗೆ ಒಂದು ಅವಲೋಕನ ' ಎಂಬ ವಿಷಯದ ಬಗ್ಗೆ ವಿಷಯ ಮಂಡಿಸಿದರು. ಎರಡನೇ ಅವಧಿಯಲ್ಲಿ ʻಔಷಧೀಯ ಸಸ್ಯಗಳ ಸಂರಕ್ಷಣೆ ಮತ್ತು ಕೃಷಿ ವಿಧಾನಗಳು-ಪ್ರಾಯೋಗಿಕ ಒಳನೋಟಗಳು' ಎಂಬ ವಿಷಯದ ಬಗ್ಗೆ ವಸಂತಕಜೆ ಮತ್ತು ಮೂರನೇ ಅವಧಿಯಲ್ಲಿ ಡಾ.ಜೆಡ್ಡುಗಣಪತಿ ಭಟ್ ಸಾಮಾನ್ಯ ಖಾಯಿಲೆಗಳನ್ನು ನಿಯಂತ್ರಿಸುವಲ್ಲಿಔಷಧೀಯ ಸಸ್ಯ ಎಂಬ ವಿಷಯದ ಬಗ್ಗೆ ವಿಷಯ ಮಂಡಿಸಲಿದ್ದಾರೆ.
ಏನಿದು ವಿವೇಕ ಸಂಜೀವಿನಿ?
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ವಿದ್ಯಾಸಂಸ್ಥೆಗಳ ವಿಧ್ಯಾರ್ಥಿಗಳಿಗೆ ಔಷಧೀಯ ಗಿಡಗಳ ಬಗ್ಗೆ ಮಾಹಿತಿ ನೀಡುವುದು ಮತ್ತು ಮಕ್ಕಳಿಗೆ ಔಷಧೀಯಗಿಡವನ್ನು ನೆಡಲು ಮಾರ್ಗದರ್ಶನ ನೀಡುವುದಾಗಿದ್ದು,ಈ ನೆಲೆಯಲ್ಲಿ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಗಳ ಆಯ್ದ ಉಪನ್ಯಾಸಕರು ಮತ್ತು ಶಿಕ್ಷಕರಿಗೆ ತರಬೇತಿಯನ್ನು ನೀಡಲಾಯಿತು. ಪ್ರತೀ ಶಿಕ್ಷಕರಿಗೆ 200 ವಿದ್ಯಾರ್ಥಿಗಳಂತೆ ಸಂಸ್ಥೆಯ 20,000 ಸಾವಿರ ವಿದ್ಯಾರ್ಥಿಗಳಿಂದ ಗಿಡ ನೆಟ್ಟು ಪೋಷಿಸಲು ಮಾರ್ಗದರ್ಶನ ನೀಡುವ ಸಲುವಾಗಿ ಉಪನ್ಯಾಸಕರಿಗೆಕೊಟ್ಟ ಸೂಕ್ತ ತರಬೇತಿ ಇದಾಗಿತ್ತು.
ಜೊತೆಗೆ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಆಯ್ದ ಆರು ಗ್ರಾಮಗಳಲ್ಲಿ ನವಗ್ರಹ ವನ ಆಥವಾ ಗ್ರಾಮಕ್ಕೊಂದು ವನ/ನಕ್ಷತ್ರವನ ಎನ್ನುವ ಯೋಜನೆಯ ಮೂಲಕ ಗ್ರಾಮದಲ್ಲಿ ಔಷಧೀಯವನ ನಿರ್ಮಿಸುವುದು ಮತ್ತು ಗ್ರಾಮಸ್ಥರಗೆ ಔಷಧೀಯ ಗಿಡವನ್ನು ಪೋಷಿಸುವುದರ ಕುರಿತು ಮಾಹಿತಿಯನ್ನು ಈ ಶಿಬಿರದಲ್ಲಿ ನೀಡಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ