ಪುತ್ತೂರು: ಇನ್ನರ್‌ವೀಲ್ ಕ್ಲಬ್ ಪುತ್ತೂರು ಮತ್ತು ಪುತ್ತೂರು ಸಿಟಿ ಹಾಸ್ಪಿಟಲ್ ಚಾರಿಟೇಬಲ್ ಟ್ರಸ್ಟ್ ಜಂಟಿಯಾಗಿ ಇಂದು (ಜೂನ್ 21) ಪುತ್ತೂರು ಸಿಟಿ ಹಾಸ್ಪಿಟಲ್‌ನಲ್ಲಿ ಯೋಗ ದಿನಾಚರಣೆಯನ್ನು ಆಚರಿಸಿತು.
ಸಂಪನ್ಮೂಲ ವ್ಯಕ್ತಿಯಾಗಿ ಡಾ. ಚೇತನ ಮುದ್ರಜೆ (ಬಿ.ಎ.ಎಂ.ಎಸ್ ವೈ.ಐ.ಸಿ) ಸಹಕರಿಸಿದರು. ಪುತ್ತೂರು ಸಿಟಿ ಹಾಸ್ಪಿಟಲ್‌ನ ಪೂರ್ವ ಅಧ್ಯಕ್ಷರು ಶ್ರೀಮತಿ ಮಂಜುಳಾ ಭಾಸ್ಕರ್, ಮಕ್ಕಳ ತಜ್ಞ ಡಾ. ಎಂ.ಎಸ್ ಶೆಣೈ, ಇನ್ನರ್‌ವೀಲ್ ಸಂಸ್ಥೆಯ ನಿರ್ದೇಶಕರುಗಳಾದ ಶ್ರೀಮತಿ ವಿಜಯಲಕ್ಷ್ಮೀ ಶೆಣೈ, ಶ್ರೀಮತಿ ರಾಜಿ ಬಲರಾಮ್, ಶ್ರೀಮತಿ ವೀಣಾ ಬಿ.ಕೆ, ಇನ್ನರ್‌ವೀಲ್ ಅಧ್ಯಕ್ಷೆ ಶ್ರೀಮತಿ ಅಶ್ವಿನಿಕೃಷ್ಣ ಮುಳಿಯ ಹಾಗೂ ಇತರ ಇನ್ನರ್‌ವೀಲ್ ಸದಸ್ಯರು ಪಾಲ್ಗೊಂಡರು.
ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆ ನಡೆಯಿತು. ಸಂಧ್ಯಾ ಸಾಯ ಪ್ರಾರ್ಥಿಸಿದರು. ವಚನ ಜಯರಾಮ್ ಧನ್ಯವಾದ ಸಮರ್ಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ