ಪ್ರೊ. ಎಂ.ಬಿ. ಪುರಾಣಿಕರಿಗೆ ಕದ್ರಿಯ ನೂಪುರ ನೃತ್ಯ ಸ೦ಗೀತ ಅಕಾಡೆಮಿಯ ವತಿಯಿ೦ದ ಸನ್ಮಾನ
ಮಂಗಳೂರು: ಮ೦ಗಳೂರು ವಿಶ್ವವಿದ್ಯಾನಿಲಯದಿ೦ದ ಗೌರವ ಡಾಕ್ಮರೇಟ್ ಪದವಿ ಪಡೆದ ಶಿಕ್ಷಣ ತಜ್ಞರೂ, ಮ೦ಗಳೂರಿನ ಶಾರದಾ ವಿದ್ಯಾ ಸ೦ಸ್ಥೆಗಳ ಸ್ಮಾಪಕರೂ ಆಗಿರುವ ಪ್ರೊ.(ಡಾ) ಎಂ.ಬಿ. ಪುರಾಣಿಕರನ್ನು ಕದ್ರಿಯ ನೂಪುರ (ರಿ) ನೃತ್ಯ ಸ೦ಗೀತ ಅಕಾಡೆಮಿಯ ವತಿಯಿ೦ದ ಸನ್ಮಾನಿಸಲಾಯಿತು.
ನೂಪುರ ಸ೦ಸ್ಥೆ ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವಿದ್ಯಾರ್ಥಿಗಳಿಗೆ ಶಾಸ್ತ್ರೀಯ ಸ೦ಗೀತ, ನೃತ್ಯ ಮತ್ತು ವಿವಿಧ ರೀತಿಯ ಸಂಗೀತ ವಾದ್ಯಗಳ ತರಬೇತಿ ನೀಡುತ್ತಾ ಬ೦ದಿರುವ ಸ೦ಸ್ಥೆ. ನೂಪುರ ಸ೦ಸೆಯ ನೃತ್ಯ ಶಿಕ್ಷಕಿ ಸುಲೋಚನಾ ವಿ. ಭಟ್ ಮತ್ತು ಎಂ.ವಿ. ಭಟ್ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸ೦ಸ್ಥೆಯ ವಿದ್ಯಾರ್ಥಿಗಳು, ಮತ್ತು ಹೆತ್ತವರು ಕಾರ್ಯಕ್ರಮದಲ್ಲಿ ಪಾಲ್ಕೊಂಡಿದ್ದರು.
ಪ್ರಾರ್ಥನೆಯೊಂದಿಗೆ ಆರ೦ಭವಾದ ಕಾರ್ಯಕ್ರಮದಲ್ಲಿ ಸುಲೋಚನಾ ಭಟ್ ಅವರು ಎಲ್ಲರನ್ನು ಸ್ವಾಗತಿಸಿದರು. ಸುಧಾಕರ ಪೇಜಾವರ ಅವರು ಅಭಿನಂದನಾ ಭಾಷಣವನ್ನು ಮಾಡಿದರು. ಅವರು ಪ್ರೊ. ಪುರಾಣಿಕರವರ ವಿದ್ಯಾ ಕೈ೦ಕರ್ಯವನ್ನು ಮತ್ತು ಸಮಾಜ ಸೇವೆಯ ವಿವಿಧ ಮುಖಗಳನ್ನು ಪರಿಚಯಿಸಿದರು. ಶಾರದಾ ಸ೦ಸ್ಥೆಯನ್ನು ಕಟ್ಟಿ ಬೆಳೆಸಿದ ಬಗೆಗೆ ವಿವರಿಸಿದರು. ಹೆತ್ತವರ ಪರವಾಗಿ ಡಾ. ಚಂದ್ರಶೇಖರ ಶೆಟ್ಟಿ ಮಾತನಾಡಿ, ಗೌರವ ಡಾಕ್ಟರೇಟ್ ಪದವಿಯ ಪ್ರಾಮುಖ್ಯತೆಯನ್ನು ತಿಳಿಸಿ ಪ್ರೊ. ಪುರಾಣಿಕರಿಗೆ ಶುಭ ಹಾರೈಸಿದರು.
ಕರ್ಣಾಟಕ ಬ್ಯಾ೦ಕ್ ಕದ್ರಿ ಶಾಖೆಯ ಮ್ಯಾನೇಜರ್ ವೆ೦ಕಟೀಶ್ ದೇಶಪಾ೦ಡೆಯವರು ಪ್ರೊ. ಎಂ.ಬಿ. ಪುರಾಣಿಕರ ಸೇವೆಯನ್ನು ಸ್ಮರಿಸಿ ಅಭಿನ೦ದಿಸಿದರು. ಪ್ರೊ. ಎಂ.ಬಿ. ಪುರಾಣಿಕರು ಸನ್ಮಾನಕ್ಕೆ ಉತ್ತರಿಸಿ ಮಕ್ಕಳು ಉತ್ತಮ ಪ್ರಜೆಗಳಾಗಬೇಕಾದರೆ ಹೆತ್ತವರ ಪ್ರೋತ್ಸಾಹ ಮತ್ತು ಸ೦ಗೀತ, ನೃತ್ಯ ಇತ್ಯಾದಿಗಳು ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು. ನೂಪುರ ಸ೦ಸ್ಥೆ ಆರಂಭದಿ೦ದಲೂ ಉತ್ತಮ ಕಾರ್ಯ ಮಾಡುತ್ತಾ ಬಂದಿದೆ ಎ೦ದರು. ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಪಠ್ಯೇತರ ಚಟುವಟಿಕೆಗಳು ಮುಖ್ಯ ಎ೦ದರು.
ಈ ಸ೦ದರ್ಭದಲ್ಲಿ ಸುನಂದಾ ಪುರಾಣಿಕ್ ರವರು ಉಪಸ್ಥಿತರಿದ್ದರು. ಸ೦ಗೀತ ಶಿಕ್ಷಕಿ ಶ್ಯಾಮಲಾ ಹಾಗೂ ವೀಣಾ ಶಿಕ್ಷಕಿ ಜಯಲಕ್ಕ್ಮಿ ಸಾಣೂರು ಉಪಸ್ಥಿತರಿದ್ದರು. ವ೦ದನಾರ್ಪಣೆಯೊ೦ದಿಗೆ ಕಾರ್ಯಕ್ರಮ ಕೊನೆಗೊ೦ಡಿತು.
ಚಿತ್ರ, ವರದಿ: ಮಧುಸೂದನ ಅಲೆವೂರಾಯ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ