ನಿಟ್ಟೆ: ಗ್ಲೋಬಲ್ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಎಫೋರ್ಡೇಬಲ್ & ಕ್ಲೀನ್ ಎನರ್ಜಿ, ಐಐಟಿ ಧಾರವಾಡ ಹಾಗೂ ಸೆಲ್ಕೋ ಫೌಂಡೇಶನ್ ನಡೆಸಿದ 'ಕ್ಯಾಟಲೈಸ್ ಟೆಕ್ ಇನ್ನೋವೇಶನ್ ಚಾಲೆಂಜ್ 2022' ಸ್ಪರ್ಧೆಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವಿದ್ಯಾಸಾಗರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಭಾಗವಹಿಸಿದ ತಂಡವು ಜಯಗಳಿಸಿದೆ. ೩೦೦ಕ್ಕೂ ಹೆಚ್ಚು ಸ್ಪರ್ಧಿಗಳನ್ನು ಹೊಂದಿದ್ದ ಈ ಆನ್‌ಲೈನ್ ಸ್ಪರ್ಧೆಯು ಹಲವಾರು ಹಂತಗಳಲ್ಲಿ ಮೌಲ್ಯಮಾಪನಗೊಂಡಿತು. ಮೆಕ್ಯಾನಿಕಲ್ ಇಂಜಿನಿಯರಿಂಗ್‌ನ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಹೃಷಿಕೇಶ್ ಕುರುಂಜಿ, ಪಿ ಆದಿತ್ಯ ಶಂಕರ್, ಪ್ರಿನ್ಸ್ ಪ್ರಸಾದ್, ರಕ್ಷಿತ್ ಟಿ ಎನ್ ಅವರನ್ನೊಳಗೊಂಡ ನಿಟ್ಟೆ ತಂಡವು ವಿಜೇತರಾಗಿ ರೂ.1,17,500/- ಫಂಡಿಂಗ್ ಪಡೆದಿದ್ದು ಅದರಲ್ಲಿ ರೂ.50,000/- 'ಹೈಬ್ರಿಡ್ ಸೋಲಾರ್-ಎಲೆಕ್ಟ್ರಿಕ್ ಅರೆಕಾ ನಟ್ ಡ್ರೈಯರ್ ವಿದ್ ಡಿಹ್ಯೂಮಿಡಿಫೈಯರ್ ಟೆಕ್ನಾಲಜಿ' ಪ್ರಾಜೆಕ್ಟ್ ಗೆ ಲಭಿಸಿದ್ದು ಉಳಿದ ರೂ.67,500/- ವಿದ್ಯಾರ್ಥಿ ಫೆಲೋಶಿಪ್ ಆಗಿ ಲಭಿಸಿದೆ.
ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಯೋಜನೆಯು ಅಡಿಕೆ ಒಣಗಿಸುವ ಯಂತ್ರವಾಗಿದ್ದು, ಅಡಿಕೆ ಅಥವಾ ಯಾವುದೇ ಉತ್ಪನ್ನದಿಂದ ತೇವಾಂಶವನ್ನು ಹೀರಿಕೊಳ್ಳಲು ವಿಶಿಷ್ಟವಾದ ಡಿಹ್ಯೂಮಿಡಿಫೈಯರ್ ತಂತ್ರಜ್ಞಾನವನ್ನು ಒಳಗೊಂಡಿದೆ. ಇತ್ತೀಚೆಗೆ, ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ನಡೆದ 'ಪ್ರಾಜೆಕ್ಟ್ ಎಕ್ಸ್‌ಪ್ರೊ 2023' ರಲ್ಲಿ ವರ್ಷದ ಅತ್ಯುತ್ತಮ ಪ್ರಾಜೆಕ್ಟ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


