ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹಲವು ಪ್ರದೇಶಗಳಲ್ಲಿ ನವಿಲಿನ ಕಲರವವನ್ನು ಜನರು ಆಲಿಸುತಿದ್ದು, ನವಿಲಿನ ಸಂತತಿಯು ಹೆಚ್ಚಾಗಿರಬಹುದೆಂಬುವ ಸುದ್ದಿಯೂ ಇದೆ. ಮತ್ತು ಇದು ಸಂತೋಷದ ಸುದ್ದಿಯೂ ಹೌದು. ಮೈಸೂರಿನ ಜನರು ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಕೂಡ ಹೊಂದಿದ್ದಾರೆ. ಇದಕ್ಕೆ ಸಾಕ್ಷಿಯೇ ಸ್ವಚ್ಛ ನಗರಿ ಎಂಬ ಪಟ್ಟ. ಮತ್ತು ಇತ್ತೀಚಿನ ದಿನಗಳಲ್ಲಿ ಮೈಸೂರಿನಲ್ಲಿ ಹಲವರು ಗಿಡ ಮರಗಳನ್ನು ಬೆಳೆಸಲು ಆಸಕ್ತಿ ಹೊಂದಿದ್ದು, ಗಿಡಗಳಿಗೆ ನೀರು ಹಾಕಿ ಪೋಷಿಸಲೂ ಕೂಡ ಮುಂದಾಗಿದ್ದಾರೆ ಮತ್ತು ಪ್ಲಾಸ್ಟಿಕ್ ಮುಕ್ತ ಮಾಡಲು ಹಲವು ಸಂಸ್ಥೆ ಕೂಡ ಜನಸಾಮಾನ್ಯರೊಂದಿಗೆ ಕೈ ಜೋಡಿಸಿವೆ. ಇವೆಲ್ಲವೂ ಸೇರಿ ಸ್ವಚ್ಛ ನಗರಿ ಎಂಬ ಪಟ್ಟಕ್ಕೆ ನಮ್ಮ ಮೈಸೂರು ಸಾಕ್ಷಿಯಾಗಿದೆ.
ಮೈಸೂರಿನ ವನ್ಯಜೀವಿ ಛಾಯಾಗ್ರಾಹಕರು ಮತ್ತು ಆನೆಯ ಕುರಿತಾಗಿ ಅಧ್ಯಯನದಲ್ಲಿ ತೊಡಗಿರುವ ಚಿದಂಬರಂ.ಬಿ ಇವರು ನವಿಲಿನ ನರ್ತನದ ಸಮಯದಲ್ಲಿ ಅದನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ