ಮೊಬೈಲ್ ವಿದ್ಯಾರ್ಥಿ ಜೀವನಕ್ಕೆ ಬಹುದೊಡ್ಡ ಪಿಡುಗಾಗಿದೆ. ಎಲ್ಲೇ ಹೋಗಲಿ, ಏನೇ ಮಾಡಲಿ, ಕೈಯಲ್ಲಿ ಅದೊಂದು ಇಲ್ಲದಿದ್ದರೆ ಆಗುವುದೇ ಇಲ್ಲ. ಸುಮಾರು 30 ವರ್ಷಗಳ ಹಿಂದಕ್ಕೆ ಹೋದರೆ ಇಲ್ಲಿನ ಜನರಿಗೆ ಮೊಬೈಲ್ ಬಳಕೆ ತಿಳಿದಿರಲಿಲ್ಲ. ಹಾಗೆಯೇ ಆಗಿನ ಕಾಲದ ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನ ನೀಡುತ್ತಿದ್ದರು. ಈಗಿನ ಕಾಲದಲ್ಲಿ ವಿದ್ಯಾರ್ಥಿಗಳು ಓದಿಗಿಂತ ಮೊಬೈಲ್ ನಲ್ಲೇ ಹೆಚ್ಚು ಮುಳುಗಿರುತ್ತಾರೆ. ಮೊಬೈಲ್ ನಲ್ಲಿ ಸಿಗದ ವಿಷಯಗಳೇ ಇಲ್ಲ. ಅದನ್ನು ನೋಡಿಯೇ ಎಲ್ಲವನ್ನೂ ಕಲಿಯುತ್ತಿದ್ದಾರೆ.
ಇದು ಕೇವಲ ಓದಿಗೆ ಮಾತ್ರವಲ್ಲ, ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕೊರೊನಾದಂತಹ ಸಾಂಕ್ರಾಮಿಕ ರೋಗ ಇಡೀ ಜಗತ್ತಿನಲ್ಲೇ ಬಾಧಿಸುತ್ತಿದ್ದಾಗ ಅನಿವಾರ್ಯವಾಗಿ ಪೋಷಕರೂ ಸೇರಿದಂತೆ ಎಲ್ಲರೂ ಮೊಬೈಲ್‌ಗಳ ಮೇಲೆ ಅವಲಂಬಿತರಾಗಬೇಕಾಯಿತು. ಇದಕ್ಕಾಗಿ ಅದೆಷ್ಟೋ ಜನರು ಸಾಲದ ಮೊರೆ ಹೋಗಬೇಕಾದದ್ದು ಮಾತ್ರ ಸುಳ್ಳಲ್ಲ.
ದಿನದಲ್ಲಿ ಕನಿಷ್ಠ 5-6 ಗಂಟೆಗಳ ಕಾಲ ಮೊಬೈಲ್ ನಲ್ಲೇ ಕಾಲ ಕಳೆಯುತ್ತಾರೆ. ಇದರಿಂದ ಚಿಕ್ಕ ಮಕ್ಕಳ ದೃಷ್ಟಿ ಸೇರಿದಂತೆ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದಿನ ಕಳೆದಂತೆ ವಿದ್ಯಾರ್ಥಿಗಳ ಗಮನ ಮೊಬೈಲ್ ಮೇಲೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಹಾಗಾಗಿ ಸಹಜವಾಗಿ ಸಣ್ಣ ವಯಸ್ಸಿನ ಮಕ್ಕಳಲ್ಲಿ ಆರೋಗ್ಯದ ಸಮಸ್ಯೆ ಹೆಚ್ಚಾಗಲೂ ಈ ಮೊಬೈಲ್ ಕಾರಣವಾಗುತ್ತಿದೆ.
-ಅನನ್ಯ ಎಚ್ ಸುಬ್ರಹ್ಮಣ್ಯ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ