ಮಂಗಳೂರು: ವಿಶ್ವ ಹಿಂದೂ ಪರಿಷತ್- ಬಜರಂಗ ದಳ ಸಂಘಟನೆಯ ವತಿಯಿಂದ 15 ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಕೋಡಿಕಲ್ ಕಟ್ಟೆಯಲ್ಲಿರುವ ಗಣೇಶ ಮಂಟಪದಲ್ಲಿ ಗಣೇಶ ಚತುರ್ಥಿಯ ದ್ವಿತೀಯ ದಿನ (20.09. 23.) ಬುಧವಾರ ನರ್ತನ ಭಜನಾ ಸ್ಪರ್ಧೆ ಏರ್ಪಡಿಸಲಾಗಿದೆ. ಆಸಕ್ತ ತಂಡಗಳು ಸಾಂಸ್ಕೃತಿಕ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯರನ್ನು - 94811635 31 ಮೂಲಕ ಸಂಪರ್ಕಿಸಬಹುದಾಗಿದೆ.
ವಯೋಮಾನದ ಭೇದವಿಲ್ಲ. ಮಕ್ಕಳು / ಪುರುಷರು / ಮಹಿಳೆಯರೂ 8 ಜನಗಳ ತಂಡದೊಂದಿಗೆ ಭಾಗವಹಿಸಬಹುದು. ರೂ.6000 / = ಪ್ರಥಮ ಹಾಗೂ ರೂ. 4೦೦೦ / = ದ್ವಿತೀಯ ಬಹುಮಾನ ಮೊತ್ತ ಇರುತ್ತದೆ. ಭಾಗವಹಿಸಿದ ಎಲ್ಲಾ ತಂಡಗಳನ್ನೂ ಗೌರವಿಸಲಾಗುವುದು. ಮೊದಲ 8 ತಂಡಗಳಿಗೆ ಪ್ರಾಶಸ್ತ್ಯವಿದೆ ಎಂದು ಅಧ್ಯಕ್ಷ ಪಿ.ಮಹಾಬಲ ಚೌಟರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸುತ್ತಾ ಭಜನಾ ತಂಡಗಳನ್ನು ನೋಂದಾಯಿಸಿಕೊಳ್ಳಲು ಕೋರಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ