ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸಸ್ಯಶಾಸ್ತ್ರವಿಭಾಗ ಹಾಗೂ ಐಕ್ಯೂಎಸಿ ಜಂಟಿಸಹಯೋಗದೊಂದಿಗೆ ಕಾಲೇಜಿನ ಡಾ. ಶಿವರಾಮಕಾರಂತ ಸಭಾಭವನದಲ್ಲಿ ಸೋಮವಾರ, 'ಬೀಟ್ಪ್ಲಾಸ್ಟಿಕ್ಪೊಲ್ಯೂಶನ್ʼ ಎಂಬ ಸಂದೇಶದೊಂದಿಗೆ ವಿಶ್ವ ಪರಿಸರದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಿಲಿಕುಳ ಸಸ್ಯೋದ್ಯಾನ ಮತ್ತು ಔಷಧೀಯ ಸಸ್ಯಗಳ ಉದ್ಯಾನವನದ ಮೇಲ್ವಿಚಾರಕ ಉದಯ್‌ಕುಮಾರ್ ಶೆಟ್ಟಿ ಭಾಗವಹಿಸಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಲಮೂಲಗಳಿಗೆ ಆಸಿಡ್ ಸೇರುತ್ತಿರುವುದರಿಂದ ಜಲಚರಗಳ ಜೀವಕ್ಕೆ ಹಾನಿಯಾಗುತ್ತಿರುವುದಲ್ಲದೆ, ಅವುಗಳನ್ನು ಆಹಾರವಾಗಿ ಸೇವಿಸುವ ಮನುಷ್ಯರ ಮೇಲೂ ದುಷ್ಪರಿಣಾಮವಾಗುತ್ತದೆ. ಈ ಬೇಜವಾಬ್ದಾರಿ, ಆಹಾರಸರಪಳಿಯ ಜೊತೆಗೆ, ಇಡೀ ಪರಿಸರ ವ್ಯವಸ್ಥೆಯನ್ನೇ ನಾಶಪಡಿಸುತ್ತಿದೆ, ಎಂದು ಆತಂಕ ವ್ಯಕ್ತಪಡಿಸಿದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ವಿಶ್ವ ಪರಿಸರ ದಿನದ ಮಹತ್ವವನ್ನು ವಿವರಿಸಿದರು. ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಶೋಭಾ, ಆಂತರಿಕ ಗುಣಮಟ್ಟ ಮತ್ತು ಮೌಲ್ಯಮಾಪನದ ಕೇಂದ್ರದ ಸಂಯೋಜಕ ಡಾ. ಸಿದ್ಧರಾಜು, ಸಸ್ಯಾಶಾಸ್ತ್ರವಿಭಾಗದ ಉಪನ್ಯಾಸಕಿ ಕಾವ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಚೈತನ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಅನುಷಾ ಸ್ವಾಗತಿಸಿದರು. ಕಾರ್ತಿಕ್ ಧನ್ಯವಾದ ಸಮರ್ಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ