ಮುಡಿಪು: ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗವು ಪ್ರಕಟಿಸಿದ ಸಾಧಕ ಸಂಭ್ರಮ ಕೃತಿಯನ್ನು ಮಂಗಳಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ಇತ್ತೀಚೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನಾಚರಣೆಯ ಗೌರವ ಪುರಸ್ಕೃತರ ಕುರಿತ ಸಾಧನೆಯನ್ನು ಒಳಗೊಂಡ ಈ ಕೃತಿಯು ಕುಲಪತಿ ಪ್ರೊ.ಪಿ ಎಸ್ ಯಡಪಡಿತ್ತಾಯ ಅವರ ಪ್ರಧಾನ ಸಂಪಾದಕತ್ವ ಹಾಗೂ ಕನ್ನಡ ವಿಭಾಗದ ಡಾ. ಧನಂಜಯ ಕುಂಬ್ಳೆ ಇವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿದೆ. ಕೃತಿಯಲ್ಲಿ ಕರಾವಳಿಯ ಮತ್ತು ಕರಾವಳಿ ಮೂಲದಿಂದ ಹೋಗಿ ದೂರದ ಊರುಗಳಲ್ಲಿದ್ದು ಸದ್ದಿಲ್ಲದೆ ಸಾಧನೆ ಮಾಡಿದ ವಿವಿಧ ಕ್ಷೇತ್ರಗಳ 33 ಸಾಧಕರ ವಿವರಗಳಿವೆ.
ಸಮಾರಂಭದಲ್ಲಿ ನಿಟ್ಟೆ ವಿವಿ ಕುಲಾಧಿಪತಿ ಡಾ. ಎನ್ ವಿನಯ ಹೆಗ್ಡೆ, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್ ಯಡಪಡಿತ್ತಾಯ, ಡಾ.ಅನುರಾಧಾ ಯಡಪಡಿತ್ತಾಯ, ಪ್ರೊ.ಶಿವಣ್ಣ, ಪ್ರಸಾರಾಂಗದ ನಿರ್ದೇಶಕ ಪ್ರೊ.ಸೋಮಣ್ಣ, ಸಂಪಾದಕ ಡಾ. ಧನಂಜಯ ಕುಂಬ್ಳೆ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ