ವಿದ್ಯಾರ್ಥಿ ಪ್ರತಿಭೆಗೆ ಶೈಕ್ಷಣಿಕ ಸ್ಪರ್ಧೆಗಳೇ ವೇದಿಕೆಗಳು: ಡಾ. ಭೋಜ ಪೂಜಾರಿ

Upayuktha
0

ಮಂಗಳೂರು: ನಗರದ ವಿಶ್ವವಿದ್ಯಾಲಯ ಕಾಲೇಜು ಮಂಗಳೂರಿನ ಪದವಿ ಹಾಗೂ ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗಗಳು, ಐಕ್ಯೂಎಸಿ ಸಹಯೋಗದೊಂದಿಗೆ ಅಂತರ್ ಕಾಲೇಜು ಮಟ್ಟದ "ಯು ಕೆಮಿ- 2023" ಸ್ಪರ್ಧೋತ್ಸವವನ್ನು ಬುಧವಾರ ಆಯೋಜಿಸಿದ್ದವು. 


ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಭೋಜ ಪೂಜಾರಿ ಅವರು ಮಾತನಾಡಿ, ಶೈಕ್ಷಣಿಕ ಸ್ಪರ್ಧಾ ಕೂಟಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಜ್ಞಾನ, ಕೌಶಲ್ಯ ವೃದ್ಧಿಯಾಗಲು ಉತ್ತೇಜನ ನೀಡುತ್ತವೆ. ಜೊತೆಗೆ ಸಹಭಾಗಿತ್ವ, ನವೀನ ಪ್ರತಿಭೆಗಳ ಹೊರಹೊಮ್ಮುವಿಕೆಗೆ ಪೂರಕ, ಎಂದು ಅಭಿಪ್ರಾಪಟ್ಟರು. “ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸರ್ವಶಿಕ್ಷಣ, ಸಮಗ್ರ ಶಿಕ್ಷಣ ಸೋತವರನ್ನು ಗೆಲುವಿನ ಹಾದಿಗೆ ಮರಳಲು ಸಹಾಯಮಾಡುತ್ತದೆ,” ಎಂದರು. 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯಾ ರೈ ಪುರಾತನ ಕಲಾಭವನಕ್ಕೆ ನವೀನ ರೂಪ ನೀಡಿರುವ ವಿದ್ಯಾರ್ಥಿಗಳ ಕ್ರಿಯಾಶೀಲತೆ ಶ್ಲಾಘನೀಯ, ಎಂದರು. 


ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಕೆ. ಎಮ್ ಉಷಾ, ಐಕ್ಯೂಎಸಿ ಸಂಯೋಜಕ ಡಾ.ಸಿದ್ದರಾಜು ಎಂ.ಎನ್, ವಿದ್ಯಾರ್ಥಿ ಸಂಚಾಲಕಿಯರಾದ ಸ್ಪೂರ್ತಿ ಕೆ, ಚಿತ್ರಶ್ರೀ ಎಸ್ ಮೊದಲದವರು ಉಪಸ್ಥಿತರಿದ್ದರು. ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗದ ಸಂಯೋಜಕ ಡಾ. ಲಕ್ಷ್ಮಣ ಕೆ ಸ್ವಾಗತಿಸಿ, ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ಅಕ್ಷತಾ ವಂದಿಸಿದರು. ವಿದ್ಯಾರ್ಥಿನಿ ಲಿಖಿತ ಕಾರ್ಯಕ್ರಮ ನಿರೂಪಿಸಿದರು.


ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸುರತ್ಕಲ್ ಎನ್ಐಟಿಕೆಯ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಅರುಣ್ ಎಂ ಇಸ್ಲೂರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬಹುಮಾನಗಳನ್ನು ವಿತರಿಸಿದರು.

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top