ವಿದ್ಯಾಗಿರಿ: ಮಂಗಳೂರು ವಿಶ್ವವಿದ್ಯಾಲಯದ ಬಿ.ಇಡಿ ಮೊದಲ ಸೆಮಿಸ್ಟರ್‍ನ ಹಿಂದಿ ವಿಷಯದ ಪರಿಷ್ಕೃತ ‘ಹಿಂದಿ ಶಿಕ್ಷಾಶಾಸ್ತ್ರ’ ಪಠ್ಯಪುಸ್ತಕ ವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಬುಧವಾರ ಬಿಡುಗಡೆ ಮಾಡಿದರು.
ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಶಂಕರಮೂರ್ತಿ ಎಚ್.ಕೆ,, ಲೇಖಕರಾದ ಉಪನ್ಯಾಸಕ ರಘುನಂದನ್ ಇದ್ದರು.
ಈ ಪುಸ್ತಕವು ಹಿಂದಿ ಭಾಷೆಗೆ ಸಂಬಂಧಿಸಿದಂತೆ ಭಾಷೆಯ ಪರಿಚಯ, ಭಾಷೆಯ ಘಟಕ, ಭಾಷೆಯ ವೈವಿಧ್ಯ, ಮಾತೃಭಾಷೆ, ಭಾಷಾ ನೀತಿಗಳು ಮತ್ತು ಭಾಷಾ ಸೂತ್ರಗಳು, ಭಾಷಾ ಕಲಿಕೆ, ಭಾಷಾ ಪಠ್ಯಕ್ರಮ, ಕಲಿಕಾ ಚಟುವಟಿಕೆಗಳನ್ನು ಒಳಗೊಂಡಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ