ಹರಿದ್ವಾರದ ಗಂಗಾ ತಟದಲ್ಲಿ ಮಂಗಲ ಉತ್ಸವ

Upayuktha
0


ಹರಿದ್ವಾರ:
ಪರೀಕ್ಷಿತ ಮಹಾರಾಜನಿಗೆ ಶುಕಾಚಾರ್ಯರು ಭಾಗವತ ಉಪದೇಶಿಸಿದ ಶುಕಸ್ಥಳದ ಗಂಗಾತಟದಲ್ಲಿ ಶ್ರೀಮದ್ಭಾಗವತ ಪ್ರವಚನವನ್ನು ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಆರಂಭಿಸಿ ಸನಕಾದಿಗಳು ನಾರದರಿಗೆ ಭಾಗವತವನ್ನು ಉಪದೇಶಿಸಿದ ಹರಿದ್ವಾರದ ಗಂಗಾ ತಟದಲ್ಲಿ  ಮಂಗಲ ಉತ್ಸವವನ್ನು ನಡೆಸಿದರು. 


ವ್ಯಾಸ ಸಾಹಿತ್ಯದೊಂದಿಗೆ ದಾಸಸಾಹಿತ್ಯವನ್ನೂ ಮೇಳೈಸಿ ಭಾಗವತ ಸಂದೇಶಗಳನ್ನು ಭಕ್ತರಿಗೆ ನೀಡಿದರು. ಗಾಯನದಲ್ಲಿ ಪ್ರಾದೇಶ ಆಚಾರ್ಯ , ಪಿಟೀಲಿನಲ್ಲಿ ಹೊಸಹಳ್ಳಿ ರಘುರಾಮ್ ಹಾಗೂ ಮೃದಂಗದಲ್ಲಿ ಅನಿರುದ್ಧ ಭಟ್ ಜೊತೆಗಿದ್ದರು. ಮಂಗಲದ ಕೊನೆಯಲ್ಲಿ ಭಾಗವತ ಗ್ರಂಥವನ್ನು ಮೆರವಣಿಗೆಯ ಮೂಲಕ ಗಂಗಾ ತೀರಕ್ಕೆ ತಂದು ಅವಭೃತ ಸ್ನಾನ ಆಚರಿಸಲಾಯಿತು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top