ವಿದ್ಯಾರ್ಥಿಗಳಲ್ಲಿ ಸಾಮರ್ಥ್ಯ ಬೆಳೆಸುವುದೇ ನಮ್ಮ ಗುರಿ: ಜಗದೀಶ್‌ ಭಟ್‌

Upayuktha
0

     ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತು  ಐಬಿಎಂ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಡುವೆ ಒಡಂಬಡಿಕೆ


ಮಂಗಳೂರು:
  ಕಲಿಕೆಯಲ್ಲಿ ಕಂಪ್ಯೂಟರ್‌ ಆಧಾರಿತ ಉತ್ತಮ ಗುಣಮಟ್ಟದ ತರಬೇತಿಯನ್ನು ನೀಡುವ ಉದ್ದೇಶದಿಂದ ಆರಂಭಗೊಂಡಿರುವಂತಹ ಮತ್ತೊಂದು ಹೊಸ ಪ್ರಯತ್ನ. ಈ ಮೂಲಕ ಶ್ರೀನಿವಾಸ ವಿದ್ಯಾಸಂಸ್ಥೆಯಲ್ಲಿ ಪಠ್ಯದ ಜತೆ ಸಾಮರ್ಥ್ಯಾಧಾರಿತ ಮೌಲ್ಯವನ್ನು ದತ್ತು ಪಡೆದುಕೊಳ್ಳಲಾಗುತ್ತಿದ್ದು, ಬಹುರಾಷ್ಟ್ರೀಯ ಮತ್ತು ಬೃಹತ್‌ ಕಂಪೆನಿಗಳ ಮೂಲಕ ಕಲಿಕೆಯ ಹಂತದಲ್ಲಿಯೇ ಈ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಕೊಡುವ ಕೆಲಸ ಐಬಿಎಂ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಜತೆಗಿನ ಹೊಸ ಸಂಬಂಧದ ಮೂಲಕ ನಡೆಯಲಿದೆ ಎಂದು ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ.ಸಿಎ.ಎ.ರಾಘವೇಂದ್ರ ರಾವ್‌ ಹೇಳಿದರು. 


ಜೂ.9, 2023 ರಂದು ಶ್ರೀನಿವಾಸ ಹೋಟೆಲ್ ನಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತು  ಐಬಿಎಂ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಜತೆಗಿನ ನೂತನ ಒಡಂಬಡಿಕೆಗೆ ಸಹಿ ಹಾಕುವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ನೂತನ ಒಡಂಬಡಿಕೆ ಹಾಗೂ ವಿನೂತನ ಯೋಚನೆ-ಯೋಜನೆಗಳಿಗೆ ಈ ಸಂದರ್ಭದಲ್ಲಿ ಅವರು ಸಂತಸ ವ್ಯಕ್ತಪಡಿಸಿದರು.


ಹೊಸ ಸಂಬಂಧವನ್ನು ಬೆಸೆಯುವ ಮೂಲಕ ಬಿಗಿಯಾದ ಕಲಿಕೆಗೆ ಸ್ಪೂರ್ತಿ ಸಿಕ್ಕಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಮತ್ತಷ್ಟು ಜ್ಞಾನವನ್ನು ನೀಡುವ ಕೆಲಸ ನಡೆಯಲಿದೆ ಎಂದು ಶ್ರೀನಿವಾಸ ವಿಶ್ವವಿದ್ಯಾಲಯದ ಉಪಕುಲಾಧಿಪತಿಗಳಾದ ಡಾ.ಎ.ಶ್ರೀನಿವಾಸ್‌ ರಾವ್ ಹೇಳಿದರು.


ಸಾಮರ್ಥ್ಯ -ವಿದ್ಯಾರ್ಥಿಗಳಲ್ಲಿರಬೇಕಾದ ಬಹುಮುಖ್ಯ ಗುಣ. ಈ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದೇ ನಮ್ಮ ಗುರಿ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಐಬಿಎಂ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಾಫ್ಟ್ವೇರ್ ಸರ್ವಿಸ್ ನ ಕಂಟ್ರಿ ಮ್ಯಾನೇಜರ್ ಜಗದೀಶ್‌ ಭಟ್‌ ಹೇಳಿದರು.


ಐಬಿಎಂ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ರೀಜನಲ್‌ ಮ್ಯಾನೇಜರ್‌  ಮಧುಸೂಧನ್ ಮಾತನಾಡಿ, ವಿದ್ಯಾರ್ಥಿಗಳನ್ನು ತಂತ್ರಜ್ಞಾನಿಕವಾಗಿ ಮುನ್ನಲೆಗೆ ತರುವ ವಿಶೇಷ ಕಾರ್ಯಕ್ರಮ, ಶ್ರೀನಿವಾಸ ಶಿಕ್ಷಣ ಸಂಸ್ಥೆ ಜತೆಗೆ ಈ ಒಡಂಬಡಿಕೆ ಸಾಧ್ಯವಾಗಿದ್ದು ಖುಷಿಯ ವಿಚಾರ ಎಂದರು.


ಶ್ರೀನಿವಾಸ ವಿಶ್ವವಿದ್ಯಾಲಯದ ಮೌಲ್ಯಮಾಪನ ರಿಜಿಸ್ಟ್ರಾರ್‌ ಡಾ.ಶ್ರೀನಿವಾಸ ಮಯ್ಯ ಡಿ. ಉಪಸ್ಥಿತರಿದ್ದರು. ರಿಜಿಸ್ಟ್ರಾರ್‌ ಡಾ. ಅನಿಲ್‌ ಕುಮಾರ್‌ ಸ್ವಾಗತಿಸಿ, ಅಭಿವೃದ್ಧಿ ರಿಜಿಸ್ಟ್ರಾರ್‌ ಡಾ.ಅಜಯ್‌ ಕುಮಾರ್‌ ವಂದಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Advt Slider:
To Top