ಪ್ರೀತಿ ಕೇವಲ ಮಾಯೆಯಾಗದಿರಲಿ, ಮಾಯೆಗೂ ಮೀರಿದ್ದೇ ಪ್ರೀತಿ

Upayuktha
0

  


ಪ್ರೀತಿ ಎನ್ನುವುದು ಅಚಾನಕವಾದದ್ದು. ಎಲ್ಲಿ ಬೇಕಾದರೂ ಯಾರ ಮೇಲಾದರೂ ಆಗಬಹುದು. ಪ್ರೀತಿ ಹುಟ್ಟಲು ಯಾವುದೇ ಜಾತಿ ಬೇಕಾಗಿಲ್ಲ, ಹಣ ಅಂತಸ್ತು ಬೇಕಾಗಿಲ್ಲ. ಕೆಲವು ವ್ಯಕ್ತಿಗಳಿಗೆ ಅಂದ ಚಂದದಲ್ಲಿ ನೋಡಿ ಪ್ರೀತಿ ಹುಟ್ಟಿದರೇ ಇನ್ನು ಕೆಲವರಿಗೆ ಗುಣ ನಡತೆಗೆ ಪ್ರೀತಿ ಆಗಬಹುದು.


ಪ್ರೀತಿ ಹುಟ್ಟಿದಾಗ ಹೇಳಿಕೊಳ್ಳಲು ಧೈರ್ಯವಿರುವುದಿಲ್ಲ, ಏನೆಂದುಕೊಳ್ಳುವರು ತಪ್ಪು ಭಾವಿಸುವರೋ ಎಂದು ಶೇ. 90ರಷ್ಟು ಜನರು ಆಲೋಚಿಸುತ್ತಾರೆ. ಇನ್ನು ಶೇ. 10ರಷ್ಟು ಮಂದಿ ಯಾವುದಕ್ಕೂ ಹೆದರದೇ ಏಕಾಏಕಿಯಾಗಿ ಹೇಳಿಕೊಂಡು ಮೋಸ ಮಾಡುವವರು, ಹೋಗುವವರೂ ಇರುತ್ತಾರೆ.


ಹೀಗೆ ಒಂದು ದಿನ ಒಬ್ಬ ಹುಡುಗ, ವಾಟ್ಸಾಪ್ ನಲ್ಲಿ ಹುಡುಗಿಯ ಬರವಣಿಗೆ ನೋಡಿ ಮೋಹ ಬೆಳೆಯುತ್ತದೆ. ಆದರೂ ಹುಡುಗಿಯೊಂದಿಗೆ ಹೇಳದೆ ಗೆಳೆತನದ ಹೆಸರಿನಲ್ಲಿ ಕೆಲ ಕಾಲ ಅವಳೊಂದಿಗೆ ಬೆರೆಯುತ್ತಾನೆ. ಇವನ ಪ್ರೀತಿ, ಗುಣ, ನಡತೆಯನ್ನು ನೋಡಿ ಆಕೆಗೂ ಮೋಹ ಬೆಳೆಯುತ್ತದೆ. ಆದರೂ, ಆಕೆ ಜೀವನ ಕೆಡಬಹುದು ಎಂದು ಅರೆ ಮನಸ್ಸಿನಿಂದ ಪ್ರೀತಿ ಹೇಳಿಕೊಳ್ಳುವಳು.


ಪ್ರಾರಂಭದಲ್ಲಿ ಪರಸ್ಪರ ಮಾತುಕತೆಗಳಲ್ಲೇ ಕಾಲ ಕಳೆಯುತ್ತಾರೆ. ಇಬ್ಬರೂ ಹತ್ತಿರವಾಗಿ, ಸಂತೋಷವಾಗಿ ಹೊರಗಡೆ ಸುತ್ತುತ್ತಾ ಇರುತ್ತಾರೆ. ದಿನ ಕಳೆದಂತೆ ಹುಡುಗನಿಗೆ ಆಕೆಯೊಂದಿಗೆ ಸರಿಯಾಗಿ ಮಾತನಾಡಲು ಅವಳೊಂದಿಗೆ ಸಮಯ ಕಳೆಯಲು ಅವನಿಗೆ ಸಮಯವೇ ಸಿಗುವುದಿಲ್ಲ. ಆದ್ದರಿಂದ ಬಹಳ ದುಃಖಕ್ಕೆ ಒಳಗಾಗಿ ಅವನಿಗೆ ನನ್ನ ಮೇಲೆ ಪ್ರೀತಿ ಕಡಿಮೆಯಾಗಿದೆ ಎಂದು ಅಳುತ್ತಳೇ ಮಾತನಾಡಿಸಲು ಭೇಟಿಯಾಗಬೇಕೆಂದು ಹಠ ಹಿಡಿಯುತ್ತಾಳೆ. 


ಏನೇ ಆದರೂ ಆತನು ಈಕೆಯ ಭಾವನೆಗೆ ಸ್ಪಂದಿಸುವುದೇ ಇಲ್ಲ. ಇದೇ ಕಾರಣಕ್ಕೆ ಆಕೆ ಪ್ರೀತಿ ನಿವೇದನೆ ಮಾಡಿಕೊಳ್ಳಲು ಹೆದರಿದ್ದಳು. ಹಾಗೆಯೇ ಈತನ ನಡವಳಿಕೆಯಿಂದ ಆಕೆಗೆ ಆತನ ಬಗೆಗೆ ಅನುಮಾನ ಹುಟ್ಟಿಕೊಳ್ಳುತ್ತದೆ. ಸುಮಾರು ಮೂರು ನಾಲ್ಕು ತಿಂಗಳ ಬಳಿಕ ಆಕೆ ಪ್ರೀತಿಯಿಂದ ಭೇಟಿ ಮಾಡುವ ನಿನ್ನೊಂದಿಗೆ ಸ್ವಲ್ಪ ಸಮಯ ಕಳೆಯಬೇಕು ಎಂದರೆ ಯಾವಾಗಲೂ ಸಮಯವೇ ಇಲ್ಲ ಎನ್ನುತ್ತಾ ಜಾರಿಕೊಳ್ಳುತ್ತಾನೆ. ಹೀಗೆ ದಿನ ಕಳೆಯುತ್ತಲೇ ಇರುತ್ತದೆ. ಇದರಿಂದ ಸಹಜವಾಗಿ ಅವರ ಮಧ್ಯೆ ಅಂತರ ಬೆಳೆಯಲು ಪ್ರಾರಂಭವಾಗುತ್ತದೆ. 


ಇಷ್ಟೆಲ್ಲಾ ಆದರೂ ಆಕೆಯ ಕನಿಷ್ಠ ಆಕೆಯ ದುಃಖಕ್ಕಾದರೂ ಶರಣಾಗದೇ ತನ್ನದೇ ಕೆಲಸ ಕಾರ್ಯಗಳಲ್ಲಿ ಮುಂದುವರೆದಿರುತ್ತಾನೆ. ದೂರದಲ್ಲಿ ನಿಂತು ಕೆಲಸದ ಮಧ್ಯೆ ಪ್ರೀತಿ, ಪ್ರೇಮಕ್ಕೆ ಜಾಗವಿಲ್ಲ. ನನ್ನ ಕೆಲಸವನ್ನು ಹಾಗೂ ನನ್ನನ್ನು ಅರ್ಥ ಮಾಡಿಕೊಳ್ಳುವಂತೆ ರೇಗಲು ಆರಂಭಿಸುತ್ತಾನೆ. ಇತ್ತ ಈಕೆ ಪ್ರೀತಿಯಲ್ಲಿ ಬಿದ್ದ ಮೇಲೆ ಅದೆಷ್ಟೇ ಕಷ್ಟವಾದರೂ ಸಹಿಸಿಕೊಳ್ಳಬೇಕು ಎಂದು ಮೌನಕ್ಕೆ ಜಾರುತ್ತಾಳೆ. 

-ಅನನ್ಯ ಎಚ್ ಸುಬ್ರಹ್ಮಣ್ಯ                                                                

                                                                


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top