ಕಾಸರಗೋಡು ಜಿಲ್ಲಾಮಟ್ಟದ ಕಾವ್ಯ ಸ್ಪರ್ಧೆ ಫಲಿತಾಂಶ

Upayuktha
0

ಕಾಸರಗೋಡು: ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯು ಕಾಸರಗೋಡು ಜಿಲ್ಲೆಯ ಬರಹಗಾರರನ್ನು ಪ್ರೋತ್ಸಾಹಿಸಲು ನಡೆಸಿದ ಕಾಸರಗೋಡು ಜಿಲ್ಲಾಮಟ್ಟದ ಕಾವ್ಯ ಸ್ಪರ್ಧೆಯ ಫಲಿತಾಂಶವನ್ನು  ಪ್ರಕಟಿಸಲಾಗಿದ್ದು  ಸೌಮ್ಯ ಪ್ರವೀಣ್ ಮಂಗಳೂರು  ಪ್ರಥಮ,  ಲಕ್ಷ್ಮಿ ಕೆ ಕಾಸರಗೋಡು  ದ್ವಿತೀಯ ಹಾಗೂ  ಶ್ರೀವಿದ್ಯಾ ಪಡ್ರೆ ಬೆಂಗಳೂರು  ತೃತೀಯ ಬಹುಮಾನಗಳನ್ನು ಪಡೆದಿದ್ದಾರೆ.


ಕಾಸರಗೋಡು ಜಿಲ್ಲಾ ಮಟ್ಟದ ಕವನ ಸ್ಪರ್ಧೆಯಲ್ಲಿ 30ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. ಕಾಸರಗೋಡು ಜಿಲ್ಲಾಮಟ್ಟದ ಕವನ ಸ್ಪರ್ಧೆಯಲ್ಲಿ ಬಹುಮಾನಿತರಾದವರು ಮತ್ತು ಸಕ್ರಿಯವಾಗಿ ಭಾಗವಹಿಸಿದ ಎಲ್ಲ ಸ್ಪರ್ಧಿಗಳು ಹಾಗೂ ಈ ಸ್ಪರ್ಧೆ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಕಾಸರಗೋಡಿನ ಎಲ್ಲ ಸಾಹಿತ್ಯಪ್ರಿಯರಿಗೂ ಸಾಹಿತ್ಯ ಗಂಗಾ ಮುಖ್ಯಸ್ಥ ವಿಕಾಸ ಹೊಸಮನಿ ಮತ್ತು ಸಂಚಾಲಕ ಡಾ. ಸುಭಾಷ್ ಪಟ್ಟಾಜೆ ಅಭಿನಂದನೆಗಳನ್ನು ತಿಳಿಸಿದ್ದಾರೆ.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
To Top