ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Upayuktha
1

ಧರ್ಮತ್ತಡ್ಕ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಧರ್ಮತ್ತಡ್ಕದಲ್ಲಿ ಇಂದು ಹಮ್ಮಿಕೊಳ್ಳಲಾಯಿತು. ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.


ಯೋಗಗುರು ಶ್ರೀಮತಿ ಶಾರದಾ ಎಸ್ ಭಟ್ ಕಾಡಮನೆ, ಯೋಗದ ಮಹತ್ವವನ್ನು ತಿಳಿಸುತ್ತಾ "ಯೋಗವು ಆರೋಗ್ಯವನ್ನು ವೃದ್ಧಿಸುತ್ತದೆ, ಯೋಗದಿಂದ ಶ್ವಾಸೋಚ್ವಾಸ ಸುಗಮ ಹರಿವು ಸಾಧ್ಯ, ನಿತ್ಯಯೋಗಾಭ್ಯಾಸಿಗಳಾಗಿ ಎಂದರು". ಶಾಲೆಯ ವ್ಯವಸ್ಥಾಪಕ ಎನ್. ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿ "ಜಗತ್ತಿಗೆ ಯೋಗವು ಭಾರತದ ಕೊಡುಗೆಯಾಗಿದೆ" ಎಂದರು.


ಮುಖ್ಯೋಪಾಧ್ಯಾಯ ಇ.ಎಚ್ ಗೋವಿಂದ ಭಟ್ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಿಕೆ ಶ್ರೀಮತಿ ಎನ್ ಗಂಗಮ್ಮ ಶುಭಾಶಂಸನೆಗೈದರು.

ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಶಿವಪ್ರಸಾದ್ ಸಿ ನಿರೂಪಿಸಿದರು. ಸೂರ್ಯನಾರಾಯಣ ಭಟ್ ಪಿ ವಂದಿಸಿದರು. ಸಂತೋಷ್ ಕುಮಾರ್ ಎಂ, ಈಶ್ವರಿ ಡಿ, ವಿಚೇತಾ ಬಿ, ಸುನೀತ, ಶಶಿಕುಮಾರ್, ರಾಜಕುಮಾರ್ ಕೆ, ಕೇಶವ ಪ್ರಸಾದ್ ಇ, ದಿನೇಶ್ ಕೆ, ಸಹಕರಿಸಿದರು. ನಂತರ ಯೋಗ ಗುರು ಶ್ರೀಮತಿ ಶಾರದಾ ಕಾಡಮನೆ ಅವರು ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

1 Comments
Post a Comment
Mandovi Motors Presents MONSOON BONANZA
Mandovi Motors Presents MONSOON BONANZA
To Top