ಐಸಿಐಸಿಐ ಬ್ಯಾಂಕ್‍ನಿಂದ ಟಾಟಾ ಸ್ಮಾರಕ ಕೇಂದ್ರಕ್ಕೆ ರೂ. 1200 ಕೋಟಿ ನೆರವು

Upayuktha
0

ಮಂಗಳೂರು: ದೇಶದಾದ್ಯಂತ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಕೇಂದ್ರಗಳನ್ನು ನಡೆಸುತ್ತಿರುವ ಪ್ರಮುಖ ಸಂಸ್ಥೆಯಾಗಿರುವ ಟಾಟಾ ಮೆಮೋರಿಯಲ್ ಸೆಂಟರ್‌ಗೆ (ಟಿಎಂಸಿ) ರೂ. 1,200 ಕೋಟಿ ಮೊತ್ತದ ನೆರವು ನೀಡುವ ಬದ್ಧತೆಯನ್ನು ಐಸಿಐಸಿಐ ಬ್ಯಾಂಕ್ ಪ್ರಕಟಿಸಿದೆ.


ದೇಣಿಗೆ ನೀಡುವ ಬದ್ಧತೆ ವ್ಯಕ್ತಪಡಿಸಲು ಐಸಿಐಸಿಐ ಫೌಂಡೇಷನ್ 'ಟಿಎಂಸಿ' ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಐಸಿಐಸಿಐ ಪ್ರತಿಷ್ಠಾನದ ಅಧ್ಯಕ್ಷ  ಸಂಜಯ್ ದತ್ತಾ ಮತ್ತು ಟಾಟಾ ಸ್ಮಾರಕ ಕೇಂದ್ರದ ನಿರ್ದೇಶಕ  ಡಾ. ಆರ್.ಎ. ಬಡವೆ ಅವರು ಐಸಿಐಸಿಐ ಬ್ಯಾಂಕ್ ಅಧ್ಯಕ್ಷ ಗಿರೀಶ್ ಚಂದ್ರ ಚತುರ್ವೇದಿ ಹಾಗೂ ಐಸಿಐಸಿಐ ಬ್ಯಾಂಕ್‍ನ ಕಾರ್ಯನಿರ್ವಾಹಕ ನಿರ್ದೇಶಕ ಸಂದೀಪ್ ಬಾತ್ರಾ ಅವರ ಉಪಸ್ಥಿತಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.


ಐಸಿಐಸಿಐ ಬ್ಯಾಂಕ್ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‍ಆರ್) ನಿಧಿಯಿಂದ ಈ ಮೊತ್ತವನ್ನು ದೇಣಿಗೆಯಾಗಿ ನೀಡಲಿದೆ. ಮಹಾರಾಷ್ಟ್ರದ ನವಿ ಮುಂಬೈ, ಪಂಜಾಬ್‍ನ ಮುಲ್ಲನಪುರ ಹಾಗೂ ಆಂಧ್ರಪ್ರದೇಶದ  ವಿಶಾಖಪಟ್ಟಣದಲ್ಲಿನ 'ಟಿಎಂಸಿ' ಕೇಂದ್ರಗಳಲ್ಲಿ ಒಟ್ಟಾರೆ 7.5 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಮೂರು ಹೊಸ ಕಟ್ಟಡಗಳನ್ನು ನಿರ್ಮಿಸಲು ಮತ್ತು  ಅತ್ಯಾಧುನಿಕ ಯಂತ್ರಗಳೊಂದಿಗೆ ಸಜ್ಜುಗೊಳಿಸಲು ಈ ದೇಣಿಗೆ ಬಳಕೆಯಾಗಲಿದೆ.

  

'ಟಿಎಂಸಿ'ಗೆ ಯಾವುದೇ ಸಂಸ್ಥೆಯಿಂದ ಇದುವರೆಗೆ ದೊರೆತಿರುವ ಅತಿ ದೊಡ್ಡ ದೇಣಿಗೆ ಇದಾಗಿದೆ. ಐಸಿಐಸಿಐ ಬ್ಯಾಂಕಿನ 'ಸಿಎಸ್‍ಆರ್'ನ ಅಂಗವಾಗಿರುವ ಐಸಿಐಸಿಐ ಫೌಂಡೇಷನ್ ಫಾರ್ ಇನ್‍ಕ್ಲೂಸಿವ್ ಗ್ರೋತ್ (ಐಸಿಐಸಿಐ ಫೌಂಡೇಷನ್) ಈ ಉಪಕ್ರಮವನ್ನು ಕಾರ್ಯಗತಗೊಳಿಸಲಿದೆ. ಈ ಯೋಜನೆ 2027ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಪ್ರಕಟಣೆ ಹೇಳಿದೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


إرسال تعليق

0 تعليقات
إرسال تعليق (0)
To Top